ಮರಬಿದ್ದು ಛಾವಣಿ ಕುಸಿತ

kpp home
ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಗಿರಿಜಾ ಎಂಬುವವರ ಮನೆಯ ಛಾವಣಿ ಕುಸಿದಿರುವುದು.
Published on

ಕೊಪ್ಪ: ಗಾಳಿ, ಮಳೆಗೆ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ವಿವಿಧೆಡೆ ಮನೆಯ ಗೋಡೆ, ಛಾವಣಿಗಳು ಕುಸಿದಿವೆ.

ತಾಲೂಕಿನ ಹಲವೆಡೆ ಮರ, ವಿದ್ಯುತ್ ಕಂಬಗಳು ಬಿದ್ದಿವೆ. ಬಹುತೇಕ ಗ್ರಾಮಗಳಲ್ಲಿ ಶನಿವಾರ, ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಭಾನುವಾರ ಭಂಡಿಗಡಿ ಸಮೀಪ ರಸ್ತೆಗೆ ನೀರು ಹರಿದು ಕೆಲ ಕಾಲ ಕೊಪ್ಪ-ಕಮ್ಮರಡಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ತುಳುವಿನಕೊಪ್ಪದ ಬಳಿ ರಸ್ತೆಗೆ ಬೃಹತ್ ಮರ ಬಿದ್ದು ವಾಹನ ಸಂಚಾರ ವಿಳಂಬವಾಗಿತ್ತು. ಸ್ಥಳೀಯರು ಮರ ತೆರವುಗೊಳಿಸಿದರು.

ಹಿರೇಗದ್ದೆ ಗ್ರಾಮದ ಸೊಂಪನಕೆರೆಯ ಸಂಧ್ಯಾ ಎಂಬುವವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಹುಲ್ಲುಮಕ್ಕಿಯ ಲೀಲಾ ಎಂಬುವವರ ಮನೆಯ ಗೋಡೆಗೆ ಹಾನಿಯಾಗಿದೆ. ಕಲ್ಲುಗುಡ್ಡೆ ಮೆಣಸಿನಹಾಡ್ಯದ ಗಿರಿಜಾ ಎಂಬುವವರ ಮನೆ ಛಾವಣಿಗೆ ಹಾನಿಯಾಗಿದೆ. ಅಡಿಗೆಬೈಲು ಗ್ರಾಮದ ಸುಶೀಲಾ ಅವರ ಮನೆ ಮೇಲೆ ಮರ ಬಿದ್ದಿದೆ. ಅರಳಿಕೊಪ್ಪದ ವನಜಾಕ್ಷಿ ಹಾಗೂ ಶಾರದಾ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಗುಣವಂತೆ ಗ್ರಾಮದ ಕೂಸುಗೊಳ್ಳಿ ಶ್ರೀನಿವಾಸ್ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಭಾರಿ ಮಳೆಗೆ ತುಂಗಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಹರಿಹರಪುರ, ನಾರ್ವೆ, ಭಂಡಿಗಡಿ, ಬೊಮ್ಮಲಾಪುರ ಮುಂತಾದ ಭಾಗದಲ್ಲಿ ನದಿಯ ನೀರು ಅಡಕೆ ತೋಟ, ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net