

ಹೊಳೆನರಸೀಪುರ: ಪಟ್ಟಣ ಪೊಲೀಸ್ ಠಾಣೆ ಮುಂಭಾಗದಲ್ಲಿ ದೊಡ್ಡ ಗಾತ್ರದ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಗೂಡ್ಸ್ ವಾಹನ ಜಖಂಗೊಂಡಿದೆ.
ಪಟ್ಟಣದ ಮಹಾರಾಜ ಪಾರ್ಕ್‌ನ ಎಡಭಾಗದ ಹಿಂಭಾಗದಲ್ಲಿ ಬೃಹತ್ ಮರದ ದೊಡ್ಡ ಕೊಂಬೆ ಶನಿವಾರ ರಾತ್ರಿ ಮುರಿದು ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆಲಕ್ಕೆ ವಾಲಿದ್ದು, ತಂತಿಗಳು ಜೋತು ಬಿದ್ದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಗಣಪತಿ ಪೆಂಡಾಲ್ ಪಕ್ಕದ ರಸ್ತೆಯನ್ನು ಬಂದ್ ಮಾಡಲಾಗಿದೆ. ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಪ್ರಕರಣವೊಂದರ ಗೂಡ್ಸ್ ವಾಹನವೂ ಜಖಂಗೊಂಡಿದೆ.