ಮರಕ್ಕೆ ಡಿಕ್ಕಿ, ಬೈಕ್ ಸವಾರ ಸಾವು

Crime Scene
Published on

ಆಳಂದ: ಧಂಗಾಪುರ, ಎನ್ನೆಸ್ಸೆಲ್ ಕಾರ್ಖಾನೆ ರಸ್ತೆ ಮಧ್ಯೆ ಭಾನುವಾರ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಪಡಸಾವಳಿ ಗ್ರಾಮದ ಶಬ್ಬೀರ್ ಮುಲಗೆ (೪೭) ಮೃತಪಟ್ಟವ. ಕೆಲ ವರ್ಷಗಳಿಂದ ನಿಂಬರ್ಗಾದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಹೊಲದ ಕೆಲಸಕ್ಕಾಗಿ ಸ್ವಗ್ರಾಮಕ್ಕೆ ತೆರಳಿ ಬೈಕ್‌ನಲ್ಲಿ ಮರಳುವಾಗ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪಿಎಸ್‌ಐ ವಾತ್ಸಲ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net