

ಮೈಸೂರು: ಗದ್ದಿಗೆ ರಸ್ತೆಯ ಕುಮಾರ ಬೀಡು ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿದ್ದಾರೆ.
ಮೈಸೂರಿನ ಜನತಾನಗರ ನಿವಾಸಿ, ಖಾಸಗಿ ಬ್ಯಾಂಕ್ ಮ್ಯಾನೇಜರ್ ಲೋಹಿತ್(39)ಮೃತ ದುರ್ದೈವಿ. ಮಾ.17ರಂದು ಇವರು ಕಾರಿನಲ್ಲಿ ಮೈಸೂರಿಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿಗೆ ನಾಯಿ ಅಡ್ಡ ಬಂದಿದೆ.
ಅದರ ಪ್ರಾಣ ಉಳಿಸಲು ಹೋಗಿ ಕಾರನ್ನು ಬಲಕ್ಕೆ ತಿರುಗಿಸಿದಾಗ ಅಪಘಾತ ಸಂಭವಿಸಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.