

ಭಾಲ್ಕಿ: ಒಂದು ವಾಹನಕ್ಕೆ ಒಂದು ಮರ ನೆಡುವಂತೆ ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹ್ಮದ್ ಜಾಫರ್ ಸಾಧಿಕ್ ಮನವಿ ಮಾಡಿದರು.
ಪಟ್ಟಣದ ಸಾರಿಗೆ ಇಲಾಖೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ 2020ಕ್ಕೆ ಉದ್ಘಾಟನೆ ಮಾಡಿ, ಹೊಸ ವಾಹನಗಳ ನೋಂದಣಿ, ನವೀಕರಣ, ಲೈಸೆನ್ಸ್ಗೆ ಬರುವ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಾಹನದ ಹೊಗೆಯಿಂದ ಆಗಬಹುದಾದ ರೋಗ ತಡೆಗೆ ವಾಹನಗಳ ಬಳಕೆ ಕಡಿಮೆ ಮಾಡಬೇಕು ಎಂದರು.
ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ರತಿ ವಾಹನಕ್ಕೆ ಒಂದು ಮರದ ಸಸಿ ಉಚಿತವಾಗಿ ವಿತರಿಸಲಾಯಿತು. ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ.ವಿಶ್ವನಾಥ, ಕಚೇರಿ ಅಧೀಕ್ಷಕ ವಿಜಯಲಕ್ಷ್ಮೀ, ಸಿಬ್ಬಂದಿ ಪ್ರಫುಲ್, ಮಹಾದೇವ, ಮುರಹರಿ, ಹಣಮಂತ, ಮಲ್ಲಿಕಾರ್ಜುನ, ನಾಗಶೆಟ್ಟಿ, ರಾಜಪ್ಪ ಸಾಯಿರಾಜ, ಮೋಟಾರು ತರಬೇತಿ ಶಾಲೆ, ರಶೀದ್, ಸುರೇಶ ಜುಕಾಲೆ, ಅನಿಲ್ ಸಿರ್ಸಗೆ, ಮಂಜುನಾಥ ಹಡಪದ, ಮಾಳಪ್ಪ ಇತರರಿದ್ದರು.