

ಕಳಸ: ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯಲ್ಲಿ ಕೆಲ ದಿನಗಳಿಂದ ಮರ ಬಿದ್ದಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
ಮರ ರಸ್ತೆಗೆ ಬಿದ್ದು ಕೆಲ ದಿನಗಳಾದರೂ ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಮಂಗಳೂರು, ಕಾರ್ಕಳ, ಮಣಿಪಾಲ, ಉಡುಪಿ ಕಡೆ ಹೋಗುವ ಪ್ರಯಾಣಿಕರು ಇದೇ ರಸ್ತೆಯಲ್ಲಿ ಹೋಗಬೇಕು. ರಸ್ತೆಗೆ ಮರ ಬಿದ್ದಿರುವುದರಿಂದ ರಾತ್ರಿ ವೇಳೆ ಅಪಘಾತ ಆಗುವ ಸಂಭವ ಹೆಚ್ಚಿರುತ್ತದೆ. ಅರಣ್ಯ ಇಲಾಖೆ ವಾಹನ ಇದೇ ರಸ್ತೆಯಲ್ಲಿ ಹತ್ತಾರು ಬಾರಿ ಸಂಚರಿಸುತ್ತಿದ್ದರೂ ಮರ ತೆರವಿಗೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.