

ಚಿತ್ರದುರ್ಗ: ಮರ, ಗಿಡಗಳನ್ನು ಪೋಷಿಸಿದರೆ ಅವು ಮಾನವ ಕುಲವನ್ನು ಕಾಪಾಡುತ್ತವೆ ಎಂದು ಶ್ರೀ ರಾಮಕೃಷ್ಣಾನಂದಾಶ್ರಮದ ಶ್ರೀ ಬ್ರಹ್ಮ ನಿಷ್ಠಾನಂದ ಸ್ವಾಮೀಜಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಅಭಯ ಸಾಮಾಜಿಕ ಸಂಸ್ಥೆ ಗುರುವಾರ ಆಶ್ರಮದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ವಾತಾವರಣ ಸಂಪೂರ್ಣ ಕಲುಷಿತಕೊಳ್ಳುತ್ತಿದೆ. ಇದರ ನಿಯಂತ್ರಣಕ್ಕೆ ಗಿಡಮರಗಳನ್ನು ಬೆಳೆಸಬೇಕಾಗಿದೆ ಎಂದರು.
ಮಡಿಲು ಸಂಸ್ಥೆ ಅಧ್ಯಕ್ಷ ಎಚ್. ಕುಮಾರಸ್ವಾಮಿ ಮಾತನಾಡಿ, ಆಧುನಿಕ ಬದುಕಿನ ಗೀಳಿನಿಂದ ಪರಿಸರ ನಾಶವಾಗುತ್ತಿದೆ ಎಂದು ಆ ತಂಕ ವ್ಯಕ್ತಪಡಿಸಿದರು.
ಅಭಯ ಸಾಮಾಜಿಕ ಸಂಸ್ಥೆ ನಿರ್ದೇಶಕ ಭರತ್ ಮಾತನಾಡಿ, ಮನೆಗೊಂದು ಸಸಿ ನೆಟ್ಟು ಬೆಳೆಸುವುದು ನಮ್ಮ ಸಂಸ್ಕೃತಿಯಾಗಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಮಜಹರ್‌ಉಲ್ಲಾ, ನಿರ್ದೇಶಕ ಗುರುಮೂರ್ತಿ, ಮಡಿಲು ಸಂಸ್ಥೆ ಅಧ್ಯಕ್ಷ ಕುಮಾರ ಸ್ವಾಮಿ, ಕಾರ್ಯದರ್ಶಿ ಆನಂದಪ್ಪ, ಸದಸ್ಯರಾದ ದ್ಯಾಮಕುಮಾರ್, ಮಹಾಂತೇಶ್, ಪ್ರದೀಪ್, ಭರತ್, ರಮೇಶ್, ತಿಪ್ಪೇಸ್ವಾಮಿ, ಡಾ.ನವೀನ್ ಸಜ್ಜನ್, ಡಾ. ದೀಕ್ಷಿತ್, ಪತ್ರಕರ್ತ ಗಿರೀಶ್, ಸುರೇಂದ್ರಬಾಬು ಇತರರು ಇದ್ದರು,