ಮರ ಕೆತ್ತುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

28 Dwd 3
Published on

ಧಾರವಾಡ: ವ್ಯಕ್ತಿಯೊಬ್ಬ ರಸ್ತೆ ಪಕ್ಕದ ಮರವೊಂದನ್ನು ಪ್ರತಿನಿತ್ಯ ಕೆತ್ತುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರ 4ನೇ ಕ್ರಾಸ್​ನಲ್ಲಿರುವ ರಸ್ತೆ ಪಕ್ಕದ ಮರವನ್ನು ರಮೇಶ ಹುಟಗಿ ಎಂಬಾತ ನಿತ್ಯ ಕೆತ್ತುತ್ತಿದ್ದ. ಪೆಲ್ಟೊ ಫಾರ್ಂ ಜಾತಿಯ ಮರ ಇದಾಗಿದ್ದು, ರಮೇಶನ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ಆ ದೃಶ್ಯ ಸೆರೆ ಹಿಡಿದಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ರಮೇಶ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮರದಿಂದ ಅಂಟು ತೆಗೆಯಲು ಈ ರೀತಿ ಮಾಡುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದ್ದು, ಆತನಿಗೆ ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net