ಮೈಸೂರು: ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ನಗರದ ಹೆಬ್ಬಾಳು ರಿಂಗ್ ರಸ್ತೆ ಬಳಿ ಇರುವ ದಿ ರಿವೈವ್ ಆಸ್ಪತ್ರೆಯಿಂದ ಆ.10 ರಿಂದ ಒಂದು ತಿಂಗಳ ಕಾಲ ಮನೋರೋಗ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಮೋಹನ್‌ಕುಮಾರ್ ತಿಳಿಸಿದರು.
ಮಾಸಾಚರಣೆಗೆ ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಮಕ್ಕಳಿಗೆ ಸಂಬಂಧಿಸಿದ ಪುಸ್ತಕ, ಮನೋರೋಗಿಗಳಿಗಾಗಿ ಉಚಿತ ಸಹಾಯ ವಾಣಿಗೂ ಅಂದು ಬೆಳಗ್ಗೆ 11ಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಪುಸ್ತಕ ಬಿಡುಗಡೆಗೊಳಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ಪಂದಿಸಲು ಆಸ್ಪತ್ರೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಈ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶ ಹೊಂದಲಾಗಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 7892790995 ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಆಸ್ಪತ್ರೆಯ ಸಮಾಲೋಚಕ ಎಂ.ಕೆ. ಪ್ರಭುದೇವ್, ಡಾ. ಕೃಷ್ಣ ಇದ್ದರು.