ಮನೋ ವೈದ್ಯಕೀಯ ಸಂಘದ ವಾರ್ಷಿಕ ಸಮ್ಮೇಳನ ಸೆ.೧೨ರಿಂದ

11 ckm 11 dr.chandrashekar
ಡಾ.ಚಂದ್ರಶೇಖರ್
Published on

ಚಿಕ್ಕಮಗಳೂರು: ಭಾರತೀಯ ಮನೋವೈದ್ಯರ ಸಂಘ ಕರ್ನಾಟಕ ಶಾಖೆ,ಚಿಕ್ಕಮಗಳೂರು ಮನೋವೈದ್ಯರ ಸಂಘ ಮತ್ತು ಮಾನಸಿಕ ಆರೋಗ್ಯ ವಿಭಾಗವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಚಿಕ್ಕಮಗಳೂರು ರವರ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ ೧೨ರಿಂದ೧೪ ರವರೆಗೆ ತೇಗೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ೩೫ ನೇ ವಾರ್ಷಿಕ ಸಮ್ಮೇಳನ ನಡೆಯಲಿದೆ ಎಂದು ಸಂಘದ ಖಜಾಂಚಿ ಡಾ.ಚಂದ್ರಶೇಖರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಂಗವಾಗಿ ನಗರದ ಹನುಮಂತಪ್ಪ ವೃತ್ತದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಜಾಥಾ ನಡೆಯಲಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಮಾನಸಿಕ ಆರೋಗ್ಯ ತಜ್ಞರ ಸಮ್ಮೇಳನದಲ್ಲಿ ಹಲವಾರು ವಿಚಾರ ಗೋಷ್ಠಿಗಳು, ಪ್ರಬಂಧಗಳು ಮಂಡನೆಯಾಗಲಿದೆ. ಮತ್ತು ಎಂಇಸಿ ಕಾಲೇಜಿನ ಸಭಾಂಗಣದಲ್ಲಿ ಮಹಿಳೆಯರು ಮತ್ತು ಸಾಮಾಜಿಕ ಮಾಧ್ಯಮ ಎಂಬ ಸವಾಲಿನ ವಿಷಯದ ಬಗ್ಗೆ ಮಾನಸಿಕ ಆರೋಗ್ಯ ತಜ್ಞರು, ವಕೀಲರು ಮತ್ತು ಹಿರಿಯ ಪೋಲೀಸ್ ಅಧಿಕಾರಿಗಳ ತಂಡ ವಿಷಯ ಮಂಡನೆ ಮತ್ತು ವಿಚಾರ ವಿನಿಮಯ ನಡೆಸಲಿದ್ದಾರೆ ಎಂದರು.

ಮೂರುದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಗೆ ಸಂಬAಧಿಸಿದ ತಪ್ಪು ಕಲ್ಪನೆಗಳು, ನಕಾರಾತ್ಮಕ ನಂಬಿಕೆಗಳು ಮತ್ತು ಭೇದಭಾವದಿಂದ ವ್ಯಕ್ತಿ ತನ್ನ ಸಮಸ್ಯೆಯನ್ನು ಒಪ್ಪಿಕೊಳ್ಳಲು, ಚಿಕಿತ್ಸೆ ಪಡೆಯಲು ಅಥವಾ ಸಹಾಯ ಕೋರುವುದಕ್ಕೂ ಹಿಂಜರಿಯುತ್ತಾನೆ. ಇಂತಹ ತಪ್ಪು ಕಲ್ಪನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಶಾಲೆ, ಕೆಲಸದ ಸ್ಥಳ ಹಾಗೂ ಕುಟುಂಬದಲ್ಲಿ ಸಹಾನುಭೂತಿ ಬೆಳೆಸುವುದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಾಮಾನ್ಯ ಆರೋಗ್ಯ ಸಮಸ್ಯೆಗಳಂತೆ ನೋಡುವುದು, ಯಶಸ್ವಿ ಚಿಕಿತ್ಸೆಯ ಉದಾಹರಣೆಗಳನ್ನು ಹಂಚಿಕೊಳ್ಳುವುದು, ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರು ದುರ್ಬಲರಲ್ಲ ಅವರು ಸಹ ನಮ್ಮಂತೆಯೇ ಕನಸುಗಳಿರುವ, ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು. ಕಳಂಕವನ್ನು ದೂರ ಮಾಡಿದಾಗ ಮಾತ್ರ ಅವರು ಸಂಪೂರ್ಣ ಜೀವನವನ್ನು ಬದುಕಲು ಸಾಧ್ಯ ಎಂಬೆಲ್ಲಾ ವಿಚಾರಗಳು ಚರ್ಚೆಯಾಗಲಿದೆ ಎಂದರು.

ಮನೋವೈದ್ಯಶಾಸ್ತç ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಿಗೆ ಸೀಮಿತವಾಗದೆ, ಹೊಸ ತಂತ್ರಜ್ಞಾನ ಹಾಗೂ ಸೃಜನಶೀಲ ವಿಧಾನಗಳತ್ತ ಮುಖ ಮಾಡುತ್ತಿದೆ. ಔಷಧ ಚಿಕಿತ್ಸೆಯ ಜೊತೆಗೆ ಮನೋಚಿಕಿತ್ಸೆ ಕಲಾ ಚಿಕಿತ್ಸೆ, ಸಂಗೀತ ಚಿಕಿತ್ಸೆ, ತಂತ್ರಜ್ಞಾನ ಆಧಾರಿತ ಡಿಜಿಟಲ್ ವೇದಿಕೆಗಳು. ಕೃತಕ ಬುದ್ಧಿಮತ್ತೆ ಆಧಾರಿತ ಸಲಹೆಗಾರಿಕೆ ಮುಂತಾದವುಗಳು ಹೊಸ ದಾರಿಯನ್ನು ತೋರಿಸುತ್ತಿವೆ. ಇಂತಹ ನವೀನ ಚಿಕಿತ್ಸೆಗಳು ರೋಗಿಯ ವೈಯಕ್ತಿಕ ಅವಶ್ಯಕತೆಗಳನ್ನು ಗುರುತಿಸಿ, ಅವರಿಗೆ ಸೂಕ್ತವಾದ ಸಮಗ್ರ ಆರೈಕೆ ನೀಡಲು ಸಹಾಯಕವಾಗುತ್ತವೆ ಈಬಗ್ಗೆ ಜನರಿಗೆ ಮಾಹಿತಿ ತಲುಪಿಸುವ ಮೂಲ ಉz್ದೆÃಶವಿದೆ ಎಂದು ಹೇಳಿದರು.

ಹೊಸ ಆವಿಷ್ಕಾರಗಳು ನಡೆದಂತೆಲ್ಲಾ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಎದುರಿಸಲು ಪ್ರಯತ್ನಶೀಲತೆ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹೊಸ ಸಂಶೋಧನೆಗಳು ಸಹಕಾರಿಯಾಗುತ್ತವೆ ಮತ್ತು ಹೊಸ ಸಂಶೋಧನೆಗಳು ನಡೆದಂತೆಲ್ಲಾ ಅವುಗಳನ್ನು ಸಾರ್ವತ್ರಿಕವಾಗಿ ಬಳಸಲು ಮಾನ್ಯತೆ ಪಡೆಯಬೇಕಾಗಿರುತ್ತದೆ. ಫಲಿತಾಂಶವನ್ನು ಓರೆಗಚ್ಚಿ ಪ್ರಚಲಿತ ವಿದ್ಯಾಮಾನಕ್ಕೆತಕ್ಕಂತೆ ಒಗ್ಗಿಸಬೇಕಾಗುತ್ತದೆ. ವೈಜ್ಞಾನಿಕ ಸಮ್ಮೇಳನಗಳು ಅಂತಹ ಪ್ರಯತ್ನಕ್ಕೆ ವೇದಿಕೆಯಾಗುತ್ತದೆ. ಈ ದಿಶೆಯಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಕೆ.ಆರ್ ವೆಂಕಟೇಶ್, ಜಂಟಿ ಸಂಘಟನಾ ಕಾರ್ಯದರ್ಶಿ ಡಾ.ವಿನಯ್‌ಕುಮಾರ್, ಡಾ.ಪವಿತ್ರ, ಡಾ.ಅನ್ನಪೂರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net