ಮನೆಯೊಳಗೆ ಬಂದ ಉಡ ರಕ್ಷಿಸಿದ ಸ್ನೇಕ್ ಮಹೇಶ್

30 yelandur 03
ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಸವಣ್ಣ ಎಂಬುವವರ ಮನೆಯಲ್ಲಿದ್ದ ಉಡವನ್ನು ಉರಗ ರಕ್ಷಕ ಸ್ನೇಕ್ ಮಹೇಶ್ ಸುರಕ್ಷಿತರವಾಗಿ ಹಿಡಿದಿರುವುದು.
Published on

ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಮನೆಯೊಂದಕ್ಕೆ ಬಂದಿದ್ದ ಉಡವನ್ನು ಉರಗ ರಕ್ಷಕ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


ಗ್ರಾಮದ ಬಸವಣ್ಣ ಎಂಬುವರ ಮನೆಗೆ ಭಾನುವಾರ ಉಡ ಬಂದಿದೆ. ಕೂಡಲೇ ಇವರು ಉರಗ ರಕ್ಷಕ ಸ್ನೇಕ್ ಮಹೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಹೇಶ್, ಸುರಕ್ಷಿತವಾಗಿ ಹಿಡಿದಿದ್ದಾರೆ.


ಗ್ರಾಮೀಣ ಭಾಗದಲ್ಲಿ ಉಡ ಮನೆಗೆ ಬಂದರೆ ಅಪಶಕುನವಾಗುತ್ತದೆ. ಮನೆಯವರಿಗೆ ತೊಂದರೆಯಾಗುತ್ತದೆ ಎಂಬ ಮೂಢನಂಬಿಕೆ ಇದೆ. ಉಡ ಕೂಡ ಪರಿಸರ ಸ್ನೇಹಿಯಾಗಿದ್ದು, ಜೀವ ವೈವಿಧ್ಯತೆಯಲ್ಲಿ ಇದರ ಪಾತ್ರವೂ ಪ್ರಮುಖವಾಗಿದೆ. ಪರಿಸರ ಸಮತೋಲನದಿಂದ ಇರಬೇಕಾದರೆ ಇಂತಹ ಪ್ರಾಣಿಗಳ ಇರುವಿಕೆ ಮಹತ್ವ ಪಡೆದುಕೊಳ್ಳುತ್ತದೆ. ಮೌಢ್ಯತೆಯಿಂದ ಎಲ್ಲರೂ ಹೊರಬರಬೇಕು. ಇದನ್ನು ಕೊಲ್ಲುವ, ನೋಯಿಸುವ ಕೆಲಸ ಮಾಡಬಾರದು. ಇದು ಮನುಷ್ಯರಿಗೆ ಏನೂ ಮಾಡುವುದಿಲ್ಲ ಎಂದು ಸ್ನೇಕ್ ಮಹೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net