

ಚಿತ್ರದುರ್ಗ: ಚಿತ್ರದುರ್ಗ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿ ವಿವಿಧ ತಾಲೂಕುಗಳಲ್ಲಿ ನಡೆಯಲಿರುವ 85 ವಯಸ್ಸು ಮೀರಿದ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಯಿಂದಲೇ ಮತದಾನ ಶನಿವಾರ ಆರಂಭವಾಯಿತು.
ಕ್ಷೇತ್ರ ವ್ಯಾಪ್ತಿ ವಿವಿಧ ತಾಲೂಕುಗಳಲ್ಲಿ ಮನೆಯಿಂದಲೇ ಮತದಾನಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 95 ಅಧಿಕಾರಿ- ಸಿಬ್ಬಂದಿಯನ್ನು ನಿಯೋ ಜಿಸಲಾಗಿದೆ ಹಾಗೂ 85 ಪ್ಲಸ್ ಹಿರಿಯ ನಾಗರಿಕರು 2722 ಹಾಗೂ 1526 ಅಂಗ ವಿಕಲರ ಸೇರಿ 4248 ಮಂದಿ ಹೆಸರು ನೋಂದಾಯಿ ಸಿಕೊಂಡಿದ್ದಾರೆ.
ಚಳ್ಳಕೆರೆ ತಾಲೂಕಿನಲ್ಲಿ 85 ಪ್ಲಸ್ ಹಿರಿಯ ನಾಗರಿಕರು 220,ಅಂಗವಿಕಲರು 279 ಹಾಗೂ 15 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿ ಸಲಾಗಿದೆ. ಚಿತ್ರದುರ್ಗ 138-56-9. ಮೊಳಕಾಲ್ಮೂರು 87-81-13. ಹೊಳಲ್ಕೆರೆ 192-55-10. ಹೊಸದುರ್ಗ 284-121-11. ಹಿರಿಯೂರು 203-123-8. ಪಾವಗಡ 499-208-7 ಹಾಗೂ ಸಿರಾ ತಾಲೂಕಿನಲ್ಲಿ 85 ಪ್ಲಸ್ ಹಿರಿಯ ನಾಗರಿಕರು 1099, ಅಂಗ ವಿಕಲರು 603 ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದು, 22 ಅಧಿಕಾರಿ-ಸಿಬ್ಬಂದಿಯನ್ನು ಇದಕ್ಕಾಗಿ ನಿಯೋ ಜಿಸಲಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ, ಮೊಳಕಾಲ್ಮೂರು, ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಏ.13ರಿಂದ 15, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆಗಳಲ್ಲಿ ಏ.13ರಿಂದ 14 ಹಾಗೂ ಚಳ್ಳಕೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಏ.13ರಿಂದ 16ರ ವರೆಗೆ, ನಿತ್ಯ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮತದಾನ ಮಾಡಬಹುದಾಗಿದೆ.
ಹೆಚ್ಚುವರಿ ಬಿಯುಗಳ ಹಂಚಿಕೆ
ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಗೆ ಎರಡು ಬ್ಯಾಲೆಟ್ ಯೂನಿಟ್ ಸಿದ್ಧಪಡಿಸಬೇಕಿದೆ. ಇದಕ್ಕಾಗಿ ಈ ಮೊದಲು ಪೂರೈಕೆ ಆಗಿದ್ದ ಬ್ಯಾಲೆಟ್ ಯೂನಿಟ್‌ಗಳೊಂದಿಗೆ ಜಿಲ್ಲೆಗೆ ಪೂರೈಕೆಯಾಗಿದ್ದ ಹೆಚ್ಚುವರಿ 1 ಸಾವಿರ ಬಿಯುಗಳ ಫಸ್ಟ್ ಲೆವೆಲ್ ಚೆಕ್ಕಿಂಗ್ (ಎಫ್‌ಎಲ್‌ಸಿ) ಕಾರ್ಯ ನಗರದ ಹೊರವಲಯ ಇವಿ ಎಂ ಗೋದಾಮಿನಲ್ಲಿ ಶುಕ್ರವಾರ ನಡೆಯಿತು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉಸ್ತುವಾರಿಯಲ್ಲಿ ಚೆಕ್ಕಿಂಗ್ ನಡೆದ ಬಳಿಕ ಕ್ಷೇತ್ರ ವ್ಯಾಪ್ತಿ 8 ತಾಲೂಕುಗಳಿಗೂ (ಚಿತ್ರದುರ್ಗ ಜಿಲ್ಲೆ 6 ಹಾ ಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ) ಹೆಚ್ಚುವರಿ ಬಿಯುಗಳನ್ನು ರ‌್ಯಾಂಡ ಮೈ ಸೇಷನ್ ಮೂಲಕ ಹಂಚಿಕೆ ಮಾಡಲಾಯಿತು.
ಅಂಚೆ ಮತಪತ್ರಗಳು
ಇದರೊಂದಿಗೆ 9352 ಪೋಸ್ಟಲ್ ಬ್ಯಾಲೆಟ್‌ಗಳನ್ನೂ ಸಂಬಂಧಿಸಿದ ತಾಲೂಕುಗಳ ಸಹಾಯಕ ಚುನಾವಣಾಧಿಕಾರಿಗಳಿಗೆ ರವಾನಿಸ ಲಾ ಯಿತು. ಚಳ್ಳಕೆರೆ 1032, ಚಿತ್ರದುರ್ಗ 983, ಮೊಳಕಾಲ್ಮೂರು 616, ಹೊಳಲ್ಕೆರೆ 911, ಹೊಸದುರ್ಗ 1211, ಹಿರಿಯೂರು 891,ಪಾ ವಗಡ 1266,ಶಿರಾಕ್ಕೆ 2442 ಅಂಚೆ ಮತಪತ್ರಗಳನ್ನು ಕಳಿಸಲಾಯಿತು.
*ಕೋಟ್
ಮತದಾರರಿಗೆ ನೋಟಿಸ್ ನೀಡಿ ದಿನಾಂಕ ತಿಳಿಸಲಾಗಿದೆ. ಮತದಾರರ ಮನೆಗೆ ತೆರಳುವ ತಂಡದಲ್ಲಿ ಮತಗಟ್ಟೆ, ಸಹಾಯಕ ಮತಗಟ್ಟೆ ಅಧಿಕಾರಿಗಳು,ಪೊಲೀಸ್,ವಿಡಿಯೋ ಗ್ರಾಫರ್ ಹಾಗೂ ಸೂಕ್ಷ್ಮವೀಕ್ಷಕರು ಇರಲಿದ್ದಾರೆ. ತಂಡಗಳು ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿ ಗೆ ಹೋಗುತ್ತವೆ ಎಂಬ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ.
ಟಿ.ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ.