

ಚನ್ನರಾಯಪಟ್ಟಣ : ತಾಲೂಕಿನ ಆನೆಕೆರೆ ಗ್ರಾಮದಲ್ಲಿ ಗುರುವಾರ ಮನೆಯ ಸಜ್ಜಾ ಮೇಲಿಟ್ಟಿದ್ದ ಕೀ ಸಹಾಯದಿಂದ ಹಾಡುಹಗಲೇ ಒಳಪ್ರವೇಶಿಸಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ 135 ಗ್ರಾಂ ತೂಕದ ಚಿನ್ನಾಭರಣ ಹಾಗು 25 ಸಾವಿರ ರೂ. ನಗದು ಕಳವು ಮಾಡಿ ಕಳ್ಳರು ಪರಾರಿಯಾದ್ದಾರೆ.
ಗ್ರಾಮದ ನಾಗೇಶ ಎಂಬುವವರು ಮನೆಗೆ ಬೀಗ ಹಾಕಿ ಎಂದಿನಂತೆ ಸಜ್ಜಾ ಮೇಲೆ ಕೀ ಇಟ್ಟು ಚನ್ನರಾಯಪಟ್ಟಣ ಆಸ್ಪತ್ರೆಗೆ ತೆರಳಿದ್ದರು. ವಾಪಾಸ್ ಬಂದು ಕೀಯಿಂದ ಮನೆ ಬಾಗಿಲು ತೆರೆದು ನೋಡಿದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿದೆ.
ಬೀರು ಮುರಿದಿರುವ ಕಳ್ಳರು 4.50 ಲಕ್ಷ ರೂ ಮೌಲ್ಯದ 48 ಗ್ರಾಂ ತೂಕದ ಚಿನ್ನದ ಬಳೆ, 48 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಮಾಟಿ, 8 ಗ್ರಾಂ ತೂಕದ ಚಿನ್ನದ ಓಲೆ, 8 ಗ್ರಾಂ ತೂಕದ ಚಿನ್ನದ ಉಂಗುರ, 13 ಗ್ರಾಂ ತೂಕದ ಚಿನ್ನದ ಸರ ಹಾಗು 25 ಸಾವಿರ ರೂ. ನಗದು ದೋಚಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.