ಮನೆಯಲ್ಲ ಅರಮನೆ ಕೊಟ್ಟರೂ ಗಡ್ಡಿ ಬಿಡಲ್ಲ

ydg03
Published on

ಕಕ್ಕೇರಾ: ಸಾಹೇಬ್ರಾ ನಮ್ ನಡುಗಡ್ಡಿ ಮಂದಿಗೆ ಮನಿ ಮತ್ತು ರೊಕ್ಕಾನೂ ಬ್ಯಾಡ್ರೀ… ಹೊಳಿ ದಾಟಾಕ ಸಣ್ಣದೊಂದು ಬ್ರಿಜ್ ಐತ್ರೀ ನೀವ್ಯಾಕ್ ಮಳೆಗಾಲಕೊಮ್ಮೆ ನಮ್ಮೂರಿಗೆ ಬಂದು ಊರು ಬಿಡ್ರಿ…ಊರು ಬಿಡ್ರಿ ಅಂತೀರಿ.. ನಮಗ ನೆಮ್ಮದಿಯಿಂದ ಇರಲು ಬಿಡಿ.
ಪ್ರವಾಹ ಪೀಡಿತ ನೀಲಕಂಠರಾಯನ ಗಡ್ಡಿಗೆ ಭಾನುವಾರ ಸುರಪುರ ತಹಸೀಲ್ದಾರ್ ವಿಕಯಮಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಡ್ಡಿ ಜನರು ಒಕ್ಕೊರಲಿನಿಂದ ಹೇಳಿದ ಮಾತು.

ನೀಲಕಂಠರಾಯನ ಗಡ್ಡಿ ಜನತೆಯೊಂದಿಗೆ ಚರ್ಚಿಸಿದ ಅವರು, ಪ್ರತಿವರ್ಷ ಮಳೆಗಾಲಕ್ಕೊಮ್ಮೆ ಕೃಷ್ಣಾನದಿಗೆ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಟ್ಟಾಗ ಈ ಗ್ರಾಮದ ಸುತ್ತಲೂ ಪ್ರವಾಹ ಉಂಟಾಗಿ ಸಾವು-ನೋವು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಅದಕ್ಕಾಗಿ ಸರ್ಕಾರ ನಿಮ್ಮೆಲ್ಲರ ಸುರಕ್ಷತೆಗಾಗಿ ಹೊಸೂರ ಬಳಿ ಜಮೀನು ಖರೀದಿಸಿ ಪ್ರತಿ ಕುಟುಂಬಕ್ಕೆ ಸೂರು, ರಸ್ತೆ, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧವಿದ್ದು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿವೆಲ್ಲರೂ ಒಪ್ಪಿಗೆ ಸೂಚಿಸಿದರೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.

ಇದಕ್ಕೆ ಸಮ್ಮತಿ ಸೂಚಿಸದ ಗಡ್ಡಿ ಜನರು, ಇಲ್ಲಿ ನಮ್ಮ ಮುತ್ತಾತನ ಕಾಲದಿಂದಲೂ ಇಲ್ಲಿಯೇ ವಾಸವಾಗಿz್ದÉÃವೆ. ಹೊಲದಲ್ಲಿ ಅಲ್ಪಸ್ವಲ್ಪ ಸಜ್ಜಿ, ತೊಗರಿ, ಜೋಳ ಬೆಳೆದು ನೀಲಕಂಠರಾಯನ ದೇವರ ದಯೆಯಿಂದ ಎಲ್ಲರೂ ಚನ್ನಾಗಿz್ದÉÃವೆ. ಕೃಷ್ಣಾನದಿಗೆ ಎಷ್ಟು ನೀರು ಹರಿದರೂ ನಮ್ಮೂರಿಗೆ ಏನೂ ಆಗುವುದಿಲ್ಲ. ಮಾಜಿ ಶಾಸಕ ದಿ.ರಾಜಾ ವೆಂಕಟಪ್ಪನಾಯಕ ಅವರು ಸಣ್ಣದೊಂದು ಬ್ರಜ್ ನಿರ್ಮಿಸಿಕೊಟ್ಟು ಪುಣ್ಯಕಟ್ಟಿಕೊಂಡಿದ್ದಾರೆ. ಹೀಗಾಗಿ ಈ ನಡುಗಡ್ಡಿ ಬಿಟ್ಟು ಅರಮನೆ ಕಟ್ಟಿಸಿಕೊಟ್ಟರೂ ನಾವ್ಯಾರು ಈ ಗ್ರಾಮ ತೊರೆಯುವುದಿಲ್ಲ ಎಂದು ಖಡಾ ಖಂಡಿತವಾಗಿ ತಹಸೀಲ್ದಾರ್‌ಗೆ ಹೇಳಿದರು. ಅಲ್ಲದೆ ನಮಗೆ ಪದೇ ಪದೇ ಗ್ರಾಮ ಬಿಡಿ ಎಂದು ತೊಂದರೆ ನಿಡಬೇಡಿ ಎಂದು ಮನವಿ ಕೂಡ ಮಾಡಿದರು.

ಕಂದಾಯ ನಿರೀಕ್ಷಕ ಮಲಕಾಜಪ್ಪ, ಗ್ರಾಮ ಆಡಳಿತಾಧಿಕಾರಿ ಬಸವರಾಜ, ಪುರಸಭೆ ಅಧಿಕಾರಿ ಕೃಷ್ಣಾ ರಾಠೋಡ್, ಗ್ರಾಮ ಸಹಾಯಕರಾದ ಅಲ್ಲಾಭಕ್ಷ ಶ್ಯಾನಿ, ಮದನ್, ಗ್ರಾಮಸ್ಥರಾದ ರಾಯಪ್ಪ ಪೂಜಾರಿ, ಹಣಮಂತ ಗುರಿಕಾರ, ಲಚಮಣ್ಣ, ಅಮರೇಶ, ದ್ಯಾಮವ್ವ, ಯಲ್ಲಮ್ಮ, ಸಣ್ಣ ಹಣಮಂತ, ಮುಕ್ಕಣ್ಣ, ಆದಪ್ಪ, ಕನಕಪ್ಪ, ನೀಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net