ಮನೆಯಯಲ್ಲಿ ಕಳ್ಳತನ:ಲಕ್ಷಾಂತರ ಮೌಲ್ಯದ ಚಿನ್ನಭರಣ ಕಳವು

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಹಾಸನ : ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಬೋರ್ಡನಲ್ಲಿಟ್ಟಿದ್ದ 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರ ಸಮೀಪದ ತಮ್ಲಾಪುರದಲ್ಲಿ ಇತ್ತೀಚೆಗೆ ನಡೆದಿದೆ.
ನಿವಾಸಿ ಅಶ್ವಿನಿ ಅವರು ಅನಾರೋಗ್ಯ ನಿಮಿತ್ತ ಮೇ 2 ರಿಂದ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮಾರನಹಳ್ಳಿಯ ತವರು ಮನೆಗೆ ತೆರಳಿದ್ದರು. ಮೇ 9 ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ವಿಚಾರ ತಿಳಿದಿದೆ. ಬಲವಾದ ಆಯುಧದಿಂದ ಮನೆ ಬೀಗ ಮುರಿದು ಒಳಪ್ರವೇಶಿಸಿರುವ ಕಳ್ಳರು ಕಬೋರ್ಡನಲ್ಲಿಟ್ಟಿದ್ದ 20 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್, 10 ಗ್ರಾಂ ತೂಕದ 2 ಜೊತೆ ಚಿನ್ನದ ಓಲೆ ಹಾಗು 60 ಸಾವಿರ ರೂ. ನಗದು ಕಳುವಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net