ಮನೆಯ ಲಾಕರ್‌ನಲ್ಲಿದ್ದ ವಾಚ್, ಚಿನ್ನಾಭರಣ ಕಳವು

house-Theft
Published on

ಮೈಸೂರು: ಇಲವಾಲ ಗ್ರಾಮದ ಸಂಜಯ್‌ಕುಮಾರ್ ಮನೆಗೆ ನುಗ್ಗಿರುವ ಖದೀಮರು, 61 ಸಾವಿರ ರೂ. ಮೌಲ್ಯದ ಚಿನ್ನದ ಕೈ ಚೈನು ಹಾಗೂ 8 ಸಾವಿರ ರೂ. ಮೌಲ್ಯದ ಕೈಗಡಿಯಾರವನ್ನು ದೋಚಿದ್ದಾರೆ.

ಸಂಜಯ್‌ಕುಮಾರ್ ಅವರು ಕುಟುಂಬ ಸಹಿತ ಹಾಸನದ ಪರಸನಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಮೇ 25ರಂದು ವಾಪಸ್ ಬಂದಾಗ ಕಬ್ಬಿಣ ಹಾಗೂ ಮರದ ಬಾಗಿಲುಗಳು ತೆರೆದಿದ್ದವು.

ಒಳಹೋಗಿ ನೋಡಿದಾಗ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಲಾಕರ್‌ನಲ್ಲಿದ್ದ ಈ ವಸ್ತುಗಳೆಲ್ಲ ಕಳುವಾಗಿದ್ದವು.

ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net