ಮನೆಯ ಬೀಗ ಮುರಿದು 5.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

theft home
Published on

ಹಾಸನ : ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ 5.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರ ಹೊರವಲಯದ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ನಡೆದಿದೆ.
ನಿವಾಸಿ ಹೇಮಂತ್ ಕುಮಾರ ಅವರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಎಸ್.ಎಂ.ಕೆ. ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರು. ಬಂಡಿ ಹಬ್ಬದ ಹಿನ್ನಲೆ ಹುಟ್ಟೂರು ಕಟ್ಟಾಯ ಗ್ರಾಮಕ್ಕೆ ಮೇ 10 ರಂದು ತೆರಳಿದ್ದರು. ಮೇ 12 ರಂದು ಮನೆಗೆ ಬಂದು ನೋಡಿದಾಗ ಕಿಡಿಗೇಡಿಗಳು ಬಾಗಿಲು ಮುರಿದು ಒಳನುಗ್ಗಿರುವ ವಿಚಾರ ತಿಳಿದಿದೆ. ಬಲವಾದ ಆಯುಧದಿಂದ ಬೀರುವಿನ ಬಾಗಿಲು ಮುರಿದು 15 ಗ್ರಾಂ ತೂಕದ ಒಂದು ಜೊತೆ ಮುತ್ತಿನ ಓಲೆ, 12 ಗ್ರಾಂನ ಒಂದು ಜೊತೆ ಹವಳದ ಓಲೆ, 12 ಗ್ರಾಂ ತೂಕದ ಒಂದು ಜೊತೆ ಚಿನ್ನದ ಜೇಡದ
ಓಲೆ, 10 ಗ್ರಾಂನ ಚಿನ್ನದ ಕರಿಮಣಿ ಓಲೆ, 8 ಗ್ರಾಂ ತೂಕದ ಚಿನ್ನದ ಸಾದಾ ಓಲೆ, 15 ಗ್ರಾಂ ತೂಕದ ಮಾಟಿ, 2 ಗ್ರಾಂನ ಮೂಗುತಿ, 50 ಗ್ರಾಂ ತೂಕದ ಚಿನ್ನದ ಉದ್ದ ಸರ, 1 ಕೆ.ಜಿ. ತೂಕದ ಬೆಳ್ಳಿಯ ಚೊಂಬು, 2 ಬೆಳ್ಳಿಯ ಬಟ್ಟಲು, 2 ಬೆಳ್ಳಿಯ ಲೋಟ, ಬೆಳ್ಳಿಯ ದೀಪ ಸೇರಿ ಇತರ ಬೆಳ್ಳಿ ಸಾಮಾಗ್ರಿ ಕದ್ದಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net