

ಚಿತ್ರದುರ್ಗ: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರ ಬೇಕೆಂಬ ದೃಢ ಸಂಕಲ್ಪದೊಂದಿಗೆ ನಮ್ಮ ಪಕ್ಷ ಶನಿವಾರದಿಂದ ಜ.29ರವರೆಗೆ ವಿಜಯ ಸಂಕಲ್ಪ ಅಭಿ ಯಾನ ಹಮ್ಮಿಕೊಂಡಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಕೋಟೆ ಬಳಿ ಶನಿವಾರ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯ,ಕೇಂದ್ರ ಸಾಧನೆಗಳನ್ನು ತಿಳಿಸುವ ವಿಜಯ ಸಂ ಕಲ್ಪ ಹಾಗೂ ಪಕ್ಷದ ಸದಸ್ಯತ್ವ ನೀಡುವ ಅಭಿಯಾನಕ್ಕೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ಸಿಕ್ಕಿದೆ. ವಿಜಯಪುರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಭಿಯಾನ ಉದ್ಘಾಟಿಸಿದ್ದಾರೆ. ಮಾಜಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೇರಿ ಪಕ್ಷದ ಅನೇಕ ಹಿರಿಯ ನಾಯಕರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಅಭಿಯಾನದ ಸಂದರ್ಭದಲ್ಲಿ ಮನೆ,ಮನೆಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುವುದು. ಪಕ್ಷದ ಪರ ಘೋಷಣೆಗಳನ್ನು ಗೋಡೆ ಮೇಲೆ ಬರೆಯಲಾಗುವುದು.ಸದಸ್ಯತ್ವ ಅಭಿಯಾನದ ಅಂಗವಾಗಿ ಮಿಸ್‌ಕಾಲ್ ಕೊಟ್ಟರೆ ಸದಸ್ಯತ್ವ ನೋಂದಣಿ ಆಗಲಿದೆ. ಈಗಾಗಲೇ ಸದಸ್ಯತ್ವ ಪಡೆದಿದ್ದ ಅದರ ಮಾಹಿತಿ ತಿಳಿಯುತ್ತಿದೆ. 18 ವರ್ಷದ ತುಂಬಿದ ಯುವ ಮತದಾರರ ಕೇಂದ್ರೀಕರಿಸಿ ಈ ಅಭಿಯಾನವನ್ನೂ ಪಕ್ಷ ಹಮ್ಮಿಕೊಂಡಿದೆ ಎಂದರು.
ಇದೇ ವೇಳೆ ಶಾಸಕರು ಪಕ್ಷದ ಹಲವು ಪ್ರಮುಖರು,ಕಾರ‌್ಯಕರ್ತರೊಂದಿಗೆ ಹಲವು ಮನೆ ಮನೆಗಳಿಗೆ ತೆರಳಿ ಕರಪತ್ರ ವಿತರಿಸಿ,ಪಕ್ಷದ ಸಾಧನೆಗಳನ್ನು ವಿವರಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ,ಹರೀಶ್,ಶ್ರೀನಿವಾಸ್,ನಾಗ ರಾಜ್,ರಮೇಶಾಚಾರ್,ಕೃಷ್ಣ,ನಾಗರಾಜ್,ವೇದ,ಜಯಣ್ಣ,ತಿಮ್ಮಣ್ಣ ಮತ್ತಿತರ ನಗರಸಭಾ ಸದಸ್ಯರು,ನವೀನ್ ಚಾಲುಕ್ಯ,ಕಲ್ಲೇಶಯ್ಯ, ಡಾ.ಸಿದ್ದಾರ್ಥಗುಂಡಾರ್ಫಿ,ವೆಂಕಟೇಶ್,ನಾಗರಾಜ್‌ಬೇದ್ರೆ,ಚಂದ್ರಕಲಾಲೋಕನಾಥ್,ಪರಮೇಶ್ ಇತರರು ಇದ್ದರು.
-----