ಮನೆದೇವರ ದರ್ಶನ ಪಡೆದ ಸಚಿವ ಚೆಲುವರಾಯಸ್ವಾಮಿ

16mlk1
Published on

ಮೇಲುಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ-ಧನಲಕ್ಷ್ಮೀ ದಂಪತಿ ಮಂಗಳವಾರ ಮನೆ ದೇವರು ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.


ಮನೆದೇವರ ಸಾನ್ನಿಧ್ಯವಾದ ಮೇಲುಕೋಟೆಗೆ ಆಗಮಿಸಿದ ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮೀ, ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿ ದರ್ಶನ ಪಡೆದರು. ವಾಡಿಕೆಯಂತೆ ಯತಿರಾಜದಾಸರ್ ಗುರುಪೀಠದ ವಿಜಯಲಕ್ಷ್ಮೀ ಅಮ್ಮನವರ ದರ್ಶನ ಪಡೆದರು.


ಮಂಡ್ಯದಲ್ಲಿ ಸ್ವಾತಂತ್ರೊೃೀತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮೇಲುಕೋಟೆಗೆ ಆಗಮಿಸಿ ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಚೆಲುವನಾರಾಯಣನ ದರ್ಶನ ಪಡೆದು ಯದುಗಿರಿನಾಯಕಿ ಅಮ್ಮನವರಿಗೆ ಮಡಿಲು ತುಂಬಿದ ಸಚಿವ ದಂಪತಿ, ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ತೆರಳಿ ನವಗ್ರಹರೂಪಿಯಾದ 9 ಮೆಟ್ಟಲುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.


ದೇವಾಲಯಕ್ಕೆ ಆಗಮಿಸಿದ ಸಚಿವ ದಂಪತಿಗೆ ದೇವಾಲಯಗಳಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮನೆದೇವರ ದರ್ಶನ ತೃಪ್ತಿನೀಡಿದೆ ಎಂದ ಸಚಿವ ಚೆಲುವರಾಯಸ್ವಾಮಿ, ರಾಜಮಹಾರಾಜರು ಅಭಿವೃದ್ಧಿಪಡಿಸಿದ್ದ ಮೇಲುಕೋಟೆಯಲ್ಲಿ ಭಕ್ತಸ್ನೇಹಿಯಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲು ಚೆಲುವನಾರಾಯಣನೇ ಶಕ್ತಿ ನೀಡುತ್ತಾನೆ. ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ತೆರಳುತ್ತಿದ್ದೆ. ಶ್ರೀನಿವಾಸನ್ ಗುರೂಜಿ ಸಲಹೆಯಂತೆ ದಂಪತಿ ಸಮೇತ ಬೆಟ್ಟಹತ್ತಿ ಯೋಗಾನರಸಿಂಹಸ್ವಾಮಿಯ ದರ್ಶನವನ್ನೂ ಪಡೆದಿದ್ದೇನೆ. ಈ ನಿರಾಳಭಾವನೆ ನೆಮ್ಮದಿ ಸಿಕ್ಕಿದೆ. ಮನೆ ದೇವರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂಬ ಆಶಯವಿದ್ದು, ನಾನೇ ಮುಂದೆ ನಿಂತು ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ. ಸರ್ಕಾರ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಶೀಘ್ರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.


ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಉಪ ವಿಭಾಗಾಧಿಕಾರಿ ನಂದೀಶ್, ದೇಗುಲದ ಇ.ಒ.ಮಹೇಶ್, ಕಾಂಗ್ರೆಸ್ ಮುಖಂಡರಾದ ಕಾಡೇನಹಳ್ಳಿ ರಾಮಚಂದ್ರು, ಯೋಗನರಸಿಂಹೇಗೌಡ, ರೈತ ಸಂಘದ ತಾಲೂಕು ಉಪಾಧ್ಯಕ್ಷ ಈಶ ಮುರಳಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net