ಮನೆಗೊಬ್ಬ ಯೋಧ ಇರಲಿ

klb4
16 ವರ್ಷ ದೇಶ ಸೇವೆ ಮಾಡಿ ತಾಯ್ನಾಡಿಗೆ ಯೋಧ ಚಂದ್ರಕಾAತ ಯಳಮೇಲಿ ಅವರನ್ನು ಆಳಂದದಲ್ಲಿ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
Published on

ಆಳಂದ: ದೇಶ ಸುರಕ್ಷಿತವಾಗಿ ಇರಬೇಕಾದರೆ ಪುರುಷ ಮಹಿಳೆ ಎನ್ನದೆ ಮನೆಗೊಬ್ಬ ಯೋಧನಾಗುವ ಅಗತ್ಯವಿದೆ ಎಂದು ಮಾಜಿ ಸೈನಿಕ ಚಂದ್ರಕಾAತ ಯಳಮೇಲಿ ಹೇಳಿದರು.

ಪಟ್ಟಣದ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, 2008ರಲ್ಲಿ ದೇಶ ಸೇವೆಗಾಗಿ ಆರ್ಮಿ ಬಟಾಲಿಯನ್ ಸೇರಿ ಪಶ್ಚಿಮ ಬಂಗಾಳ, ಸಿಕ್ಕಿಂ, ಜಮ್ಮು ಕಾಶ್ಮೀರ, ರಾಜಸ್ಥಾನ ಮತ್ತು ಅಮೃತಸರ ಗಡಿ ಭಾಗದಲ್ಲಿ 16 ವರ್ಷ ಸತತ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿರುವುದು ಸಂತಸ ತಂದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಚಿಣಮಗಿರಿಯ ಶ್ರೀ ವೀರ ಮಹಾಂತ ಶಿವಾಚಾರ್ಯ ಮಾತನಾಡಿ, ಕೇರಳ ದುರಂತ ವಿಷಯದಲ್ಲಿ ಅಲ್ಲಿಯ ಸರ್ಕಾರ ಕೈ ಚೆಲ್ಲಿ ಕುಳಿತಾಗ ಕಬ್ಬಿಣದ ಏಳು ಸೇತುವೆಗಳನ್ನು ಸೈನಿಕರು ನಿರ್ಮಿಸಿದರು. ಇವರಿಗೆ ನನ್ನದೊಂದು ಸಲಾಂ ಎಂದು ಹೇಳಿದರು.
ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಡಿವೈಎಸ್‌ಪಿ ಗೋಪಿ ಆರ್., ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಾಂತಪ್ಪ ಹಾಳಮಳ್ಳಿ, ನಿವೃತ್ತ ಉಪನಿರ್ದೇಶಕ ಬಿ.ಡಿ. ಕಲಬುರ್ಗಿ, ಕೆಕೆಆರ್‌ಡಿಬಿ ನಿವೃತ್ತ ಅಧಿಕಾರಿ ದಯಾನಂದ ಪಾಟೀಲ್ ಮಾತನಾಡಿದರು.
ಪ್ರಮುಖರಾದ ಸೂರ್ಯಕಾಂತ ತಟ್ಟಿ, ಧರ್ಮಲಿಂಗ ಜಗದೆ, ಶಶಿಕಲಾ ಜಮಾದಾರ, ಸತೀಶ ಸನ್ಮುಖ, ಹಣಮಂತ ಪಗಡೆ, ಮಲ್ಲಿಕಾರ್ಜುನ ಯಳಮೇಲಿ, ಸೂರ್ಯಕಾಂತ ಯಳಮೇಲಿ, ಮಾಣಿಕರಾವ ಬಿರಾದಾರ, ರಾಜು ಸಿಂಗೆ, ರಾಜಶೇಖರ ನಂದರ್ಗಿ ಇತರರಿದ್ದರು.
ಇದಕ್ಕೂ ಮುನ್ನ ದೇಶ ಸೇವೆ ಸಲ್ಲಿಸಿ ಮರಳಿದ ಚಂದ್ರಕಾAತ ಯಳಮೇಲಿ ಅವರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತ ಕೋರಿ ವೇದಿಕೆಗೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net