ಮನೆಗೊಂದು ಗಿಡ ಇರಲಿ

kdr paris
ಕಡೂರು ಮಾತಾಲೇಔಟ್‌ನಲ್ಲಿ ಪುರಸಭೆಯಿಂದ ಗಿಡ ನೆಡಲಾಯಿತು. ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ಮೋಹನ್, ಸುಧಾ, ಮಂಜುನಾಥ್ ಇತರರಿದ್ದರು.
Published on

ಕಡೂರು: ನಾವು ಪರಿಸರ ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದ ಕಾಳಜಿ ಪ್ರತಿ ನಾಗರಿಕನ ಜವಾಬ್ದಾರಿ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪುರಸಭೆಯಿಂದ ಮಾತಾ ಲೇಔಟ್‌ನಲ್ಲಿ ಗಿಡಗಳನ್ನು ನೆಡಲು ಚಾಲನೆ ನೀಡಿ ಮಾತನಾಡಿ, ಪರಿಸರ ನಾಶದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಪರಿಸರ ರಕ್ಷಣೆ ಮಾಡಬೇಕು. ಕೇವಲ ಪರಿಸರ ಕಾಳಜಿ ಪುರಸಭೆಯಿಂದ ಮಾತ್ರ ಸಾಧ್ಯವಿಲ್ಲ. ಪಟ್ಟಣದ ಹಸಿರೀಕರಣಕ್ಕಾಗಿ ಮನೆಗೊಂದು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಪರಿಸರದ ಸಂರಕ್ಷಣೆ ಮಾಡುವ ಆಶಯ ಪ್ರತಿಯೊಬ್ಬರಲ್ಲಿ ಇರಬೇಕು ಎಂದರು. ಪುರಸಭೆ ಸದಸ್ಯರಾದ ಮೋಹನ್, ಸುಧಾ ಉಮೇಶ್, ಗೋವಿಂದು, ಸಂದೇಶ್‌ಕುಮಾರ್, ದೇವೇಂದ್ರ, ಕೃಷ್ಣಪ್ಪ, ಖಾದರ್, ವಿನಯ್ ದಂಡಾವತಿ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಶ್ರೇಯಸ್‌ಕುಮಾರ್, ಜಗದೀಶ್, ಶ್ರೀನಿವಾಸ್‌ಮೂರ್ತಿ, ಡಿಶ್ ಮಂಜುನಾಥ್, ಕೆ.ಆರ್.ಚಂದ್ರು, ಚಿನ್ನರಾಜು ಹಾಗೂ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net