ಮನೆಗೆಲಸದವರ ರಕ್ಷಣೆಗೆ ಮುಂದಾಗಿ

CTD 19 PRESS MEET-002
Published on

ಚಿತ್ರದುರ್ಗ: ಮನೆಗೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗುವಂತೆ ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಕಾರ‌್ಯಕರ್ತೆ ಕೆ.ಆರ್.ಗಂಗಮ್ಮ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೀವನೋಪಾಯಕ್ಕಾಗಿ ಮನೆಗೆಲಸವನ್ನು ವೃತ್ತಿಯನ್ನಾಗಿ ನೆಚ್ಚಿಕೊಂಡಿರುವ ಕಾರ್ಮಿಕರಲ್ಲಿ ಹಲವರ ಮೇಲೆ ನಾನಾ ದೌರ್ಜನ್ಯಗಳಾಗುತ್ತಿದ್ದು, ಈ ಎಲ್ಲ ದೌರ್ಜನ್ಯಗಳ ವಿರುದ್ಧ ಸರ್ಕಾರಗಳು ರಕ್ಷಣೆ ಹಾಗೂ ಮನೆಗೆಲಸದ ಮಹಿಳೆಯರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ ಅಂಗವಾಗಿ ಸಂಘಟನೆಯಿಂದ ನಗರದ ತರಾಸು ರಂಗಮಂದಿರದಲ್ಲಿ ಜೂ.22ರ ಬೆಳಗ್ಗೆ 10ಕ್ಕೆ ಏರ್ಪಡಿಸಿರುವ ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಹಿಸಲಿದ್ದು, ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಉದ್ಘಾಟಿಸಲಿದ್ದಾರೆ.

ಎಸ್‌ಪಿ ಕೆ.ಪರಶುರಾಮ್, ತಹಸೀಲ್ದಾರ್ ಡಾ.ನಾಗವೇಣಿ, ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಶಾರದಮ್ಮ, ಚೈತ್ರಾ, ಶಿಲ್ಪಾ, ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net