

ಕಲಬುರಗಿ : ನಗರದ ರಾಜಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು ದುಡಿದ ಹಣವನ್ನು ಕುಡಿದು ಹಾಳು ಮಾಡುತ್ತಾನೆ ಎಂಬ ಕಾರಣಕ್ಕೆ ಆ ಹಣವನ್ನು ಆತನ ಮನೆಯಲ್ಲಿ ನೀಡಿದ ಕಾರಣಕ್ಕೆ ಕೊಲೆಯಾದ ಘಟನೆ ನಡೆದಿದೆ. ವಿಶಾಲ್ ಎಂಬಾತ ಕೊಲೆಯಾದ ಕೂಲಿ ಕಾರ್ಮಿಕ. ಅನಿಲ್ ಗುತ್ತೇದಾರ ಎಂಬುದರ ಬಳಿಯಲ್ಲಿ ವಿಶಾಲ್ ಕೂಲಿ ಮಾಡುತ್ತಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ. ಹೀಗಾಗಿ ಆತ ಕೂಲಿ ಮಾಡಿದ ಹಣವನ್ನು ಮನೆಗೆ ತಂದು ಕೊಡುವಂತೆ ಕೋರಿದ್ದರಿಂದ ಅಂಬಾರಾಯ, ಗುತ್ತೇದಾರರ ಬಳಿಯ ವಾರದ ಕೂಲಿ ಮೊತ್ತವನ್ನು ಭಾನುವಾರ ಪಡೆದುಕೊಂಡು ಆತನ ಪತ್ನಿಗೆ ನೀಡಿದ್ದ.
ಇದೇ ಕಾರಣಕ್ಕೆ ವಿಶಾಲ್ ಅಂಬಾರಾಯ ಮನೆಗೆ ಬಂದು ಜಗಳ ತೆಗೆದಿದ್ದಾನೆ. ಆಗ ಮಾತಿನ ಚಕಮಕಿ ನಡೆದಿದೆ. ಸುದ್ದಿ ಅರಿತ ಅಂಬಾರಾಯನ ಸಹೋದರ ಸಾಗರ ಸಹ ಅಲ್ಲಿಗೆ ಬಂದಿದ್ದಾನೆ. ಆಗ ರಾಡ್‌ನಿಂದ ವಿಶಾಲ್‌ಗೆ ಸಿಟ್ಟಿಗೆದ್ದು ಹೊಡೆದಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ಮನೆಗೆ ಕರೆದುಕೊಂಡು ಹೋಗಿದ್ದ ವೇಳೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಮೊದಲು ಕೊಲೆಗೆ ಯತ್ನ ಅಂತ ದಾಖಲಾಗಿದ್ದ ಕೇಸ್ ಈಗ ಕೊಲೆ ಎಂದಾಗಿದೆ. ಸಾಗರ ಮತ್ತು ಅಂಬಾರಾಯ ತಲೆ ಮರೆಸಿಕೊಂಡಿದ್ದಾರೆ.ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.