ಮನೆಗೆ ಭೇಟಿ ನೀಡಿ ಮರುಗಣತಿ ನಡೆಸಲಿ

6-SanduruP2
Published on

ಸಂಡೂರು: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ವಿಮುಕ್ತ ದೇವದಾಸಿಯರ ಕುಟುಂಬದ ಮರುಗಣತಿಗೆ ಕ್ರಮ ವಹಿಸಿರುವುದನ್ನು ಸ್ವಾಗತಿಸುವುದಾಗಿ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಹೇಳಿದರು.

ಗಣತಿಯನ್ನು ತಾಲೂಕು ಅಥವಾ ಗ್ರಾಪಂ ಮಟ್ಟದಲ್ಲಿ ನಡೆಸದೆ ವಿಮುಕ್ತ ದೇವದಾಸಿಯರ ಮನೆಗೆ ತೆರಳಿ ಮಾಡಬೇಕು. ಈ ಹಿಂದೆ ಇಂತಹ ಗಣತಿ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗಣತಿ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಅಂಜಿನಮ್ಮ, ಅನ್ನಪೂರ್ಣ, ಗಂಗಮ್ಮ, ಭಾಗ್ಯಮ್ಮ, ದುರ್ಗಮ್ಮ, ಹೊನ್ನೂರಮ್ಮ, ಲಕ್ಷ್ಮೀ, ಕೆಂಚಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net