ಮನೆಗೆ ಬೆಂಕಿ; ಜಾನುವಾರುಗಳು ಬಲಿ

ಮನೆಗೆ ಬೆಂಕಿ; ಜಾನುವಾರುಗಳು ಬಲಿ
Published on

ಹೊಳೆನರಸೀಪುರ: ಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಅನಾಹುತವಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆಲಗೌಡನಹಳ್ಳಿ ಗ್ರಾಮದ ನಿವಾಸಿ ಗೋವಿಂದಣ್ಣ ಎಂಬುವರ ಬ್ಯಾರಲ್ ಗೆ ಬೆಂಕಿ ಬಿದ್ದು ಮನೆಯಲ್ಲಿ ಕಟ್ಟಿ ಹಾಕಿದ್ದ ಆರು ಜಾನುವಾರುಗಳಲ್ಲಿ ಎರಡು ಜಾನುವಾರುಗಳು ಸುಟ್ಟು ಕರಕಲಾಗಿದ್ದು ಉಳಿದ ನಾಲ್ಕು ಜಾನುವಾರುಗಳಿಗೆ ತೀವ್ರ ಗಾಯಗಳಾಗಿವೆ ಇವುಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿವೆ ಮನೆಯಲ್ಲಿದ್ದ ಮೂರುವರೆ ಟನ್ ತಂಬಾಕು ಬೆಳೆ ಬಟ್ಟೆ ದಿನಸಿ ಪರಿಕರಗಳು ಹಲಗೆಗಳು.

ಸಂಪೂರ್ಣ ಹಾಳಾಗಿದ್ದು ಇದರಿಂದ ಸುಮಾರು ನಾಲ್ಕರಿಂದ ಐದು ಲಕ್ಷ ಅಂದಾಜು ವೆಚ್ಚದಲ್ಲಿ ನಷ್ಟವಾಗಿದೆ ಎಂದು ರೈತ ಗೋವಿಂದಣ್ಣ ಹೇಳಿದ್ದಾರೆ ವಿಷಯ ತಿಳಿಯುತ್ತಿದ್ದಂತೆ ಪಿಡಿಓ ಕೆಂಗಯ್ಯ ರಾಜಸ್ವ ನಿರೀಕ್ಷಕ ಉದಯಕುಮಾರ್ ಗ್ರಾಮ ಲೆಕ್ಕಿಗ ಪೃಥ್ವಿ ಗೌಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net