ಮನೆಗೆ ಬೆಂಕಿ ಇಟ್ಟ ಆರೋಪಿ ಬಂಧನ

Crime Logo
Published on

ಗುಂಡ್ಲುಪೇಟೆ: ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ಗುರುವಾರ ಒಂಟಿ ಮಹಿಳೆಯಿದ್ದ ಮನೆಗೆ ಬೆಂಕಿಯಿಟ್ಟ ಆರೋಪಿಯನ್ನು ತೆರಕಣಾಂಬಿ ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಚೆಲುವಯ್ಯ ಎಂಬುವರ ಮಗ ದರ್ಶನ್(21) ಗುರುವಾರ ಬೆಳಗಿನ ಜಾವಾ 4 ಗಂಟೆಗೆ ತುಳಸಮ್ಮ ಎಂಬುವರ ಮನೆಗೆ ಬೆಂಕಿ ಹಚ್ಚಿದ್ದ. ಈ ವೇಳೆ ಎಚ್ಚರವಿದ್ದ ಶಬರಿಮಲೆ ಯಾತ್ರಿಗಳು ಹೊಗೆ ಕಂಡು ಅಕ್ಕಪಕ್ಕದ ಮನೆಯವರ ಸಹಾಯದಿಂದ ಬೆಂಕಿ ನಂದಿಸಿದರು. ಬೆಂಕಿ ವ್ಯಾಪಿಸಿದ್ದರೆ ಮಹಿಳೆ ಜೀವಂತವಾಗಿ ಸುಟ್ಟು ಹೋಗುವ ಅಪಾಯ ಎದುರಾಗಿದ್ದರಿಂದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ತೆರಕಣಾಂಬಿ ಪೊಲೀಸರ ವಶಕ್ಕೆ ಒಪ್ಪಿಸಿದರು. ವಿಚಾರಣೆ ಸಂದರ್ಭದಲ್ಲಿ ಗ್ರಾಮದ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೂ ಬೆಂಕಿಯಿಟ್ಟಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net