ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

4Hukkeri2
ಹುಕ್ಕೇರಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಳ್ಳತನವಾದ ಮನೆಯಲ್ಲಿ ಶ್ವಾನದಳ ಪರಿಶೀಲನೆ ನಡೆಸಿತು. ಪೊಲೀಸ್ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ತಹಸೀಲ್ದಾರ್, ಮಂಜುನಾಥ ಕಬ್ಬೂರ ಇರುವರು.
Published on

ಹುಕ್ಕೇರಿ: ಪಟ್ಟಣದ ಬೈಪಾಸ್ ರಸ್ತೆಯ ಬಳಿಯ ಲಕ್ಷ್ಮೀ ನಗರದಲ್ಲಿರುವ ಮೀಸಲು ಪಡೆಯ ನಿವೃತ್ತ ಪೊಲೀಸ್ ಅಶೋಕ ಕಲಾಜ ಅವರ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಯಾರೂ ಇಲ್ಲದ್ದನ್ನು ನೋಡಿ ಮನೆ ಬೀಗ ಮುರಿದು ಕಳ್ಳರು ಚಿನ್ನಾಭರಣ, ನಗದು ಕದ್ದಿದ್ದಾರೆ. ಕಳೆದೊಂದು ವಾರದಿಂದ ಕುಟುಂಬದವರು ಊರಿಗೆ ತೆರಳಿದ್ದರು. ಇದನ್ನ ಗಮನಿಸಿ ಖದೀಮರು ಕನ್ನ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ತಹಸೀಲ್ದಾರ್, ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿರು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಎದುರೇ ಪುರಸಭೆಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ. ಈ ಮೊದಲು ಇದೇ ಪ್ರದೇಶದಲ್ಲಿ ಕಳ್ಳತನವಾಗಿತ್ತು. ಆದರೂ ಪುರಸಭೆಯವರು ಸಿಸಿ ಕ್ಯಾಮರಾ ಬಳಸದಿರುವುದು ವಿಪರ್ಯಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net