ಮನೆಗೆ ಕನ್ನ, ನಗದು, ಚಿನ್ನ ಕಳ್ಳತನ

Published on

ಬಳ್ಳಾರಿ : ಇಲ್ಲಿನ ಬಂಡಿಹಟ್ಟಿಯ ರಾಯಣ್ಣ ಕಾಲೊನಿಯ ಮನೆಯೊಂದರಲ್ಲಿ ಶನಿವಾರ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ, ಬೀಗ ಮುರಿದು ಪ್ರವೇಶ ಮಾಡಿರುವ ಕಳ್ಳರು, ಮನೆಯಲ್ಲಿದ್ದ 35 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನದ ಆಭರಣ, ಮೊಬೈಲ್‌ ಫೋನ್‌, 10 ಸಾವಿರ ರೂ. ನಗದು ಸೇರಿದಂತೆ ಒಟ್ಟು 47 ಸಾವಿರ ರೂ. ಬೆಲೆಯ ವಸ್ತುಗಳನ್ನು ದೋಚಿದ್ದಾರೆ ಎಂದು ಮನೆ ಮಾಲೀಕ ಕೆ.ಎಸ್‌ ಯರ‍್ರಿಸ್ವಾಮಿ ಎಂಬುವವರು ಕೌಲ್‌ ಬಜಾರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net