ಮನೆಗೆ ಕನ್ನ, ಚಿನ್ನಾಭರಣ ಕಳವು

Published on

ಬಳ್ಳಾರಿ: ನಗರದ ಕೌಲ್‌ ಬಜಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮನೆ ಬೀಗ ಒಡೆದು ₹1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ನಗರದ ನಿವಾಸಿ ನಿವೃತ್ತ ಪ್ರಿನ್ಸಿಪಾಲ್‌ ಮಂಜುನಾಥ್ ಬಿ. ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಹಿಂಬಾಗಿಲಿನ ಬೀಗ ಒಡೆದು ಕೋಣೆ ಬಾಗಿಲು ಮತ್ತು ಕಬೋರ್ಡ್‌ಗಳನ್ನು ಜಖಂಗೊಳಿಸಿ ₹1,30,500 ಲಕ್ಷ ಮೌಲ್ಯದ 43.5 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಕೌಲ್ ಬಜಾರ್ ಪೊಲೀಸರು ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net