ಮನೆಗಳ್ಳತನದ ಇಬ್ಬರು ಆರೋಪಿಗಳ ಬಂಧನ

photo-1.jpg
Published on

ದಾವಣಗೆರೆ: ಮನೆಗಳ್ಳತನ ಹಾಗೂ ಸುಲಿಗೆಯ ಪ್ರತ್ಯೇಕ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು 3.06 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಹಮಾಲಿ ಕೆಲಸಗಾರ ಹನುಮಂತಪ್ಪ ದೊಡ್ಡಮನಿ ಹಾಗೂ ಮಂಡಲೂರು ಗ್ರಾಮ ಮೂಲದ, ಭರಮಸಾಗರ ನಿವಾಸಿ ಟೀ ಅಂಗಡಿ ವ್ಯಾಪಾರಿ ಹಾಲೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಹೆಬ್ಬಾಳು ಗ್ರಾಮದ ರುದ್ರಮುನಿ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಿದ್ದರು. ಗ್ರಾಮಾಂತರ ಠಾಣೆಯ ಪಿ.ಐ ಲಿಂಗನಗೌಡ ನೆಗಳೂರ, ಪಿಎಸ್‌ಐ ಎ.ಆರ್. ಮುಂದಿನಮನಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಪತ್ತೆ ಕಾರ್ಯಕ್ಕೆ ಎಸ್ಪಿ ಡಾ. ಕೆ.ಅರುಣ್ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net