

ವಿಜಯವಾಣಿ ಸುದ್ದಿಜಾಲ ಚಾಮರಾಜನಗರ
ಕರೊನಾ ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯ ಯೋಗಾಸಕ್ತರು ಭಾನುವಾರ ಮನೆಗಳಲ್ಲೇ ಆಚರಿಸಿದರು.
ನಗರದ ಪಿಡಬ್ಲೂೃಡಿ ಕಾಲನಿಯ ಮನೆಯೊಂದರ ಮೇಲೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಲಾಯಿತು. ಕಲಾ ಸರಸ್ವತಿ ನಾಟ್ಯ ಸಂಸ್ಥೆಯ 50ಕ್ಕೂ ಹೆಚ್ಚು ಮಕ್ಕಳು ಲಾಕ್‌ಡೌನ್ ವೇಳೆ ಸಮಯ ವ್ಯರ್ಥಗೊಳಿಸದೆ ಯೋಗಾಸನ ಕಲಿತು ಅಂತಾರಾಷ್ಟ್ರೀಯ ಯೋಗ ದಿನದಂದು ಅಭ್ಯಾಸ ಮುಂದುವರಿಸಿದರು. ನಗರದ ಪಾರ್ವತಿ ಬಾಲ ಮಂದಿರದಲ್ಲಿರುವ ಹೆಣ್ಣು ಮಕ್ಕಳು ಯೋಗಭ್ಯಾಸ ಮಾಡಿದರು.
ಸಾರ್ವಜನಿಕರು ತಮ್ಮ ಮನೆಗಳಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಮನೆಗಳಲ್ಲೇ ಯೋಗಾಸನ ಮಾಡಿದರು. ಅನೇಕರು ಯೋಗಾಸನದ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ದಿನಾಚರಣೆಯ ಶುಭಾಶಯ ಕೋರಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಯೋಗ ಪ್ರಕಾಶ್, ಸುರೇಶ್ ಋಗ್ವೇದಿ, ಶ್ರಾವ್ಯ ಋಗ್ವೇದಿ, ಶ್ರೀನಿವಾಸ, ರಾಜಶೇಖರ್, ದೊರೆಸ್ವಾಮಿ, ಪ್ರಕಾಶ್ ಇತರರು ಯೋಗಾಭ್ಯಾಸ ಮಾಡಿದರು.