ಮನೆಗಳಲ್ಲೂ ವಿಶೇಷಾಲಂಕಾರ

Maha Lakshmi
Published on

ಚಿತ್ರದುರ್ಗ: ವರಮಹಾಲಕ್ಷ್ಮೀ ದೇವಿ ಹಬ್ಬದ ಅಂಗವಾಗಿ ಶುಕ್ರವಾರ ನಗರದ ಜೆಸಿಆರ್ ಬಡಾವಣೆಯ ರಾಜೇಶ್ವರಿ ಸಿದ್ಧರಾಮ್ ಅವರ ಮನೆಯಲ್ಲಿ ಅಯೋಧ್ಯೆ ಪ್ರಭು ಶ್ರೀರಾಮಚಂದ್ರ ಮಂಟಪದಲ್ಲಿ ಮಹಾಲಕ್ಷ್ಮೀ ದೇವರನ್ನು ಪ್ರತಿಷ್ಠಾಪಿಸಿ, ಕುಟುಂಬದವರು ಪೂಜೆ ಸಲ್ಲಿಸಿದರು.

ಮಾಳಪ್ಪನಹಟ್ಟಿ ನಿವಾಸಿ ಶೃತಿ ತಿಮ್ಮೇಶ್ ಅವರ ನಿವಾಸದಲ್ಲಿ ವಿಶೇಷವಾಗಿ ಮಹಾಲಕ್ಷ್ಮೀ ದೇವಿಯನ್ನು ಅಲಂಕರಿಸಿದ್ದರು. ಗಾಂಧಿ ನಗರದ ಅಶಾ ರಾಘವೇಂದ್ರ ಅವರ ಮನೆಯಲ್ಲಿ ಪುಷ್ಪಾಲಂಕಾರದೊಂದಿಗೆ ಉಂಡೆಗಳು ಸೇರಿ ವಿವಿಧ ಖಾದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net