ಮನೆಗಳಲ್ಲಿ ಕಳ್ಳತನ, ನಾಲ್ವರ ಬಂಧನ

Malamaruti
ಮಾಳಮಾರುತಿ ಪೊಲೀಸರು ಮನೆಗಳ್ಳರನ್ನು ಬಂಧಿಸಿ, ಅವರಿಂದ ಬಂಗಾರ ಮತ್ತಿತರ ವಸ್ತು ವಶಪಡಿಸಿ ಕೊಂಡಿದ್ದಾರೆ.
Published on

ಬೆಳಗಾವಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿ 10.72 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ವ್ಯಾಪ್ತಿಯ ಮನೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶ್ರೀನಗರದಲ್ಲಿ ಇಬ್ಬರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 3.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, 1 ಲಕ್ಷ ರೂ. ಮೌಲ್ಯದ 2 ಲ್ಯಾಪ್ ಟಾಪ್, 80 ಸಾವಿರ ರೂ. ಮೌಲ್ಯದ 2 ಬೈಕ್ ಸೇರಿ 5.60 ಲಕ್ಷ ರೂ. ವಸ್ತು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ನಗರದ ಅನಗೋಳದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ಅವರಿಂದ 5.12 ಲಕ್ಷ ರೂ. ಮೌಲ್ಯದ 114 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಾರೀಹಾಳ ಠಾಣೆ ವ್ಯಾಪ್ತಿಯ ಬಾಳೇಕುಂದ್ರಿ ಕೆ.ಎಚ್., ಪಂತನಗರ, ಗೋಕುಲ ನಗರ ಹಾಗೂ ಹಿರೇಬಾಗೇವಾಡಿ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net