ಮನೆಗಳ ಬಳಿ ದೀಪ ಬೆಳಗಿಸಿ

CTD 1 AYODDEYE RAM-G.H.TIPPAREDDI--00006
Published on

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಜ.22ರಂದು ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ದೀಪ ಹಚ್ಚುವ ಮೂಲಕ ರಾಮಮಂದಿರದ ಉದ್ಘಾಟನಾ ಕಾರ‌್ಯಕ್ರಮಕ್ಕೆ ಭಕ್ತಿ ಸಮರ್ಪಿಸುವಂತೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರಿಕರಲ್ಲಿ ಕೋರಿದರು.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮನೆ ಮನೆಗೆ ರಾಮಮಂದಿರ ಮಂತ್ರಾಕ್ಷತೆ ಹಂಚುವ ಕಾರ‌್ಯಕ್ಕೆ ನಗರದ ಜೆಸಿಆರ್ ಬಡಾವಣೆ ಗಣಪತಿ ದೇವಾಲಯದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಕುಡಾ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯೆ ರೋಹಿಣಿ ಚಾಲುಕ್ಯ, ನವೀನ್ ಚಾಲುಕ್ಯ, ಮುರುಗೇಶ್ ಗೌಡ್ರು,ನಾಗೇಶ್, ಸೋಮಶೇಖರ್, ರಮೇಶ್, ಕೃಷ್ಣಪ್ಪ, ಕೆ.ಮಲ್ಲಿಕಾರ್ಜುನ್, ಡಾ.ಸಿದ್ದಾರ್ಥ ಗುಂಡಾರ್ಪಿ, ಭಾರ್ಗವಿ ದ್ರಾವಿಡ್, ಮಯೂರಿ, ಗೀತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net