

ಕಿಕ್ಕೇರಿ: ಗ್ರಾಮದಲ್ಲಿ ಮಣ್ಣಿನ ಗೋಡೆಯ ಮನೆಗಳು ಸತತವಾಗಿ ಸುರಿದ ಮಳೆಗೆ ಕುಸಿದಿವೆ.
ಪದ್ಮಮ್ಮ ಎಂಬುವರ ಮನೆಯ ಮುಂದಿನ ಭಾಗದ ಗೋಡೆ ಕುಸಿದಿದೆ. ಟೈಲರ್ ಪಾಂಡು ಎಂಬುವರ ಮನೆಯ ಮಣ್ಣಿನ ಗೋಡೆ ಸಂಪೂರ್ಣ ಕುಸಿದಿದೆ. ಇವರ ಮನೆಗೆ ಹೊಂದಿಕೊಂಡಂತಿರುವ ಲಕ್ಷ್ಮೀದೇವಿ ಗುಡಿ ಸಂಪೂರ್ಣ ಕುಸಿದಿದ್ದು, ದೇವರ ಸಾಮಗ್ರಿಗಳು ಮಣ್ಣಿನಲ್ಲಿ ಹುದುಗಿ ಹೋಗಿದೆ.ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸೋಮಾಚಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.