

ಧಾರವಾಡ : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಪರಿಹಾರ ನಮೂದಿಸುವಲ್ಲಿ ತಾರತಮ್ಯ ಹಾಗೂ ಬೆಳೆ ವಿಮೆ ವಿತರಣೆ ವಿಳಂಬ ಖಂಡಿಸಿ ಧಾರವಾಡ 71 ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮನೆಗಳ ಹಾನಿಯಾದ ಅರ್ಹ ಲಾನುಭವಿಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಇದರಿಂದ ನೈಜ ಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. 2020- 21ನೇ ಸಾಲಿನ ಬೆಳೆ ವಿಮೆ ವಿತರಣೆ ವಿಳಂಬವಾಗಿದ್ದು, ವಿಮಾ ಕಂತು ರೈತರ ಕೈಗೆಟುಕುತ್ತಿಲ್ಲ. ಕೂಡಲೇ ಬೆಳೆವಿಮೆ ಹಣ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಳೇ ಡಿಎಸ್‌ಪಿ ವೃತ್ತದಿಂದ ಶ್ರೀ ಮುರುಘಾಮಠದವರೆಗೆ ನಿರ್ಮಾಣವಾದ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ಆರೋಪಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದರು.ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಈಶ್ವರ ಶಿವಳ್ಳಿ, ನಗರ ಅಧ್ಯಕ್ಷ ಅರವಿಂದ ಏಗನಗೌಡರ, ಗೌರಮ್ಮ ಬಲೋಗಿ, ಚನ್ನಬಸಪ್ಪ ಮಟ್ಟಿ, ಆನಂದ ಸಿಂಗನಾಥ, ಸಿದ್ದಣ್ಣ ಪ್ಯಾಟಿ, ರಮೇಶ ತಳಗೇರಿ, ಮಂಜುನಾಥ ನಡಟ್ಟಿ, ಭೀಮಪ್ಪ ಕಾಸಾಯಿ, ಶಿವಕುಮಾರ ನಾಡಗೌಡದೇಸಾಯಿ, ಮಲ್ಲನಗೌಡ ಪಾಟೀಲ, ಅಶೋಕ ದೊಡ್ಡಮನಿ, ಇತರರಿದ್ದರು.