

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಗೆ ಬಿದ್ದ ಮನೆಗಳ -Àಲಾನುಭವಿಗಳಿಗೆ ಪರಿಹಾರ ಘೋಷಿಸುವಲ್ಲಿ ನವಲಗುಂದ ತಹಸೀಲ್ದಾರ್, ಗ್ರಾಮ ಲೆಕ್ಕಾಽಕಾರಿ ಹಾಗೂ ಸೈಟ್ ಇಂಜನಿಯರ್ ಭ್ರಷ್ಟಾಚಾರ ಎಸಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಶಾನವಾಡ, ಪಡೆಸೂರ ಗ್ರಾಮಸ್ಥರು ಜಿಲ್ಲಾಽಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಅತಿವೃಷ್ಟಿ¬ಂದ ಶಾನವಾಡ, ಪಡೆಸೂರ ಗ್ರಾಮಗಳಲ್ಲಿ ಅನೇಕ ಮನೆಗಳು ಧರೆಗುರುಳಿವೆ. ಸರ್ಕಾರದ ಪರಿಹಾರ ಕೋರಿ ಗ್ರಾಮ ಲೆಕ್ಕಾಽಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕ್ರಮ ಕೈಗೊಳ್ಳದ ಅಽಕಾರಿಗಳು ವಿನಾಕಾರಣ ಕಚೇರಿಗೆ ಅಲೆದಾಡಿಸಿದ್ದಾರೆ. ಈ ಬಗ್ಗೆ ಮೇಲಾಽಕಾರಿಗಳನ್ನು ವಿಚಾರಿಸಿದರೆ, ಲಂಚ ಕೊಡದೆ ಮನೆ ಪರಿಶೀಲನೆ ಮÁಡುವುದಿಲ್ಲ ಎಂದಿರುವುದಾಗಿ ಆರೋಪಿಸಿದರು.
ಲಂಚ ಕೊಟ್ಟ ಫಲಾನುಭವಿಗೆ ತಮಗಿಷ್ಟದ ಕೆಟಗರಿ ಹಾಕಿ ಪರಿಹಾರ ನೀಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಅನೀಲ ಬಡಗೇರ ಅವರನ್ನು ಭೇಟಿ ಮಾಡಿ ಮನವಿ ಮÁಡಿದರೂ ಸ್ಪಂದಿಸಿಲ್ಲ. ಕೂಡಲೇ ಗ್ರಾಮಗಳಿಗೆ ಬಂದು ಪುನರ್ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಅಪರ ಜಿಲ್ಲಾಽಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ ಮರಕಂಬಿ, ಬಸವ್ವ ಮಟ್ಟಿ, ಬಸವ್ವ ಮರಿಯಪ್ಪನವರ, ಕಮಲವ್ವ ಮಡಿವಾಳರ, ಶಾಂತವ್ವ ಕೆಂಪಣ್ಣವರ, ಲಕ್ಷ÷್ಮ್ಮವ್ವ ಮಲ್ಲಾಡದ, ಸರೋಜಾ ಕನಕಪ್ಪನವರ, ರತ್ನವ್ವ ಕೆಂಪಣ್ಣವರ, ಹನುಮವ್ವ ಕನಕನವರ, ಇತರರಿದ್ದರು.