

ಕಕ್ಕೇರಾ: ಮಳೆಗಾಲ ಆರಂಭವಾಗಿದ್ದು ಪ್ರತಿಯೊಬ್ಬರೂ ತಮ್ಮ ಮನೆ ಒಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ತಾಲೂಕು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಹಮ್ಮಿಕೊಂಡ ಡೆಂಘೆ ಮತ್ತು ಮಲೇರಿಯಾ ಮಾಸಾಚರಣೆ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದರ ಜತೆಗೆ ಡೆಂಘೆ ಮತ್ತು ಮಲೇರಿಯಾದಂತ ಮಾರಕ ರೋಗದಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ದಿನದಿಂದ ದಿನಕ್ಕೆ ಡೆಂಘೆ ರೋಗ ಹೆಚ್ಚುತ್ತಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕಕ್ಕೇರಾ ಮಲೇರಿಯಾಗೆ ದೇಶದಲ್ಲಿಯೇ ಹೆಸರುವಾಸಿಯಾಗಿದ್ದು ಅದನ್ನು ತಡೆಯುವ ಪ್ರಯತ್ನ ನಮ್ಮೆಲ್ಲರ ಮೇಲಿದೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತ ತಪಾಸಣೆಗಾಗಿ ಇಬ್ಬರು ಲ್ಯಾಬ್ ಟೆಕ್ನಿಶಿಯನ್ ನಿಯೋಜಿಸಲಾಗಿದೆ. ಯಾರಿಗಾದರೂ ಚಳಿ, ಜ್ವರ, ತಲೆನೋವು ಸೇರಿ ಯಾವುದೇ ರೋಗದ ಲಕ್ಷಣ ಕಂಡುಬAದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದು ರಕ್ತ ತಪಾಸಣೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಶುಕ್ರವಾರ ಆರೋಗ್ಯ, ಪುರಸಭೆ ಹಾಗೂ ಆಶಾ ಕರ‍್ಯಕರ್ತರು ಪುರಸಭೆ ವ್ಯಾಪ್ತಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಮಾಡಲಿದ್ದು, ಉತ್ತಮ ಆರೋಗ್ಯಕ್ಕಾಗಿ ಪುರಸಭೆ ಸದಸ್ಯರು, ಆಶಾ ಕರ‍್ಯಕರ್ತರಲ್ಲದೇ ವಿವಿಧ ಸಂಘಟನೆಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವೆಂಕಟೇಶ ನಾಯಕ ಜಹಾಗೀರದಾರ, ಚಂದ್ರು ವಜ್ಜಲ್, ಮುದ್ದಣ್ಣ ಅಮ್ಮಾಪುರ, ಸೋಮಣ್ಣ ನಾಯಕ ಹವಾಲ್ದಾರ್ ಮಾಡನಾಡಿದರು. ಡಾ.ವೀಣಾ ಚಟ್ಟರಕಿ ಡೆಂಘೆ ಮತ್ತು ಮಲೇರಿಯಾ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಮಾತನಾಡಿದರು. ಶರಣಗೌಡ ಸ್ವಾಗತಿಸಿದರು. ಖಲೀಲ್ ಖಾಜಿ ವಂದಿಸಿದರು. ಶ್ರೀಮಂತ ಕಾರಂಜೆ ನಿರೂಪಣೆ ಮಾಡಿದರು.