ಮನೆ ಸುಟ್ಟವ ಪೊಲೀಸರಿಗೆ ಶರಣು

Crime Logo
Published on

ಕಲಬುರಗಿ: ಕಡಣಿ ಗ್ರಾಮದಲ್ಲಿ ನ.೨೮ರಂದು ಮನೆಗೆ ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನಿಸಿದ ಆರೋಪಿ ಶಿವಲಿಂಗಪ್ಪ ಕರೇಕಲ್ ಪೊಲೀಸರಿಗೆ ಶರಣಾಗಿದ್ದಾನೆ. ಜಮೀನು ವಾಜ್ಯ ಹಿನ್ನೆಲೆಯಲ್ಲಿ ಸಹೋದರ ಸಂಬAಧಿ ಗುಂಡೇರಾವ ಕರೇಕಲ್‌ನ ಮನೆಗೆ ಬೆಂಕಿ ಹಚ್ಚಿದ್ದ ಶಿವಲಿಂಗಪ್ಪ ಪರಾರಿಯಾಗಿದ್ದು, ಕಳೆದ ಎಂಟು ದಿನಗಳಿಂದ ತಲೆ ಮರೆಸಿಕೊಂಡಿದ್ದ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೃಷ್ಟವಶಾತ್ ಮನೆಯಲ್ಲಿನ ಆರು ಜನ ಬದುಕುಳಿದಿದ್ದರು. ಶುಕ್ರವಾರ ಸ್ವಯಂ ಪೊಲೀಸರಿಗೆ ಬಂದು ಶರಣಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ, ಪುನಃ ಕಸ್ಟಡಿಗೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net