

ಸೋಮವಾರಪೇಟೆ: ಸಮೀಪದ ಎಡ ವಾರೆ ಗ್ರಾಮದಲ್ಲಿ ಮನೆಯ ಮೇಲೆ ಮಂಗಳವಾರ ಬೆಳಗ್ಗೆ ಮರವೊಂದು ಆಕಸ್ಮಿಕವಾಗಿ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಒ.ಆರ್.ಉಣ್ಣಿ ಎಂಬುವರ ಮನೆಯ ಮೇಲೆ ವಿಜಯ ಎಂಬುವರಿಗೆ ಸೇರಿದ ತೋಟದಲ್ಲಿದ್ದ ಭಾರಿ ಗಾತ್ರದ ಮರ ಉರುಳಿದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ.
ಮನೆಯಲ್ಲಿ ಉಣ್ಣಿ, ಮೂವರು ಮೊಮ್ಮ ಕ್ಕಳು ಸೇರಿದಂತೆ ಆರು ಮಂದಿ ಇದ್ದ ಸಂದರ್ಭದಲ್ಲಿ ಮರ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಮನೆಯ ಅಟ್ಟ ತಡೆದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿ ಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುತ್ತಕ್ಕ, ಸದಸ್ಯರಾದ ಪ್ರಮೋದ್, ವಿನು, ಜುನೈದ್, ಪಿಡಿಒ ಬಾಲಕೃಷ್ಣ ರೈ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀ ಲನೆ ನಡೆಸಿದರು. ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಮತ್ತು ತಾಲೂಕು ಕಚೇರಿ ಯಿಂದ ಪರಿಹಾರ ಕೊಡಿಸಬೇಕೆಂದು ಉಣ್ಣಿಯ ವರು ಮನವಿ ಮಾಡಿದರು.