

ಮೈಸೂರು: ಬಿಜೆಪಿ ಕಾರ್ಯಕರ್ತರು ತಮ್ಮ ಮನೆ ಮೇಲೆ ಕಡ್ಡಾಯವಾಗಿ ಬಿಜೆಪಿ ಬಾವುಟ ಹಾರಿಸಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಲಹೆ ನೀಡಿದರು.
ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಿದಾಸ ರಸ್ತೆಯ ರಾಘವೇಂದ್ರಸ್ವಾಮಿ ಮಠದ ಬಳಿ ಇರುವ ವಾರ್ಡ್ ನಂ.19ರ ಬೂತ್ ನಂ.119ರ ಮನೆಯಲ್ಲಿ ಬಾವುಟ ಕಟ್ಟುವ ಮೂಲಕ ಬೂತ್ ವಿಜಯ ಅಭಿಮಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ 58,185 ಬೂತ್‌ಗಳಿದ್ದು, ಪ್ರತಿ ಬೂತ್‌ನಲ್ಲಿ ಮನೆ ಮನೆ ಸಂಪರ್ಕ ಮಾಡಿ ನಂತರ ಬೂತ್ ಸಮಿತಿ ಪರಿಶೀಲನೆ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಪ್ರತಿ ಪುಟಕ್ಕೆ ಒಬ್ಬರನ್ನು ನಿಯುಕ್ತಿ ಮಾಡುವ ಮೂಲಕ ಪೇಜ್ ಪ್ರಮುಖ್ ನೇಮಿಸಬೇಕು. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಆಲಿಸಲು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಬೇಕು ಎಂದರು.
ತಿಂಗಳ ಕಡೆಯ ಭಾನುವಾರ ಕಡ್ಡಾಯವಾಗಿ ಬೂತ್‌ನ ಎಲ್ಲ ಸದಸ್ಯರು ಒಟ್ಟಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನದಾಳದ ಮಾತಾದ ಮನ್ ಕೀ ಬಾತ್ ಕೇಳಬೇಕು ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಬೂತ್ ವಿಜಯ ಅಭಿಯಾನ ಚಾಲ್ತಿಯಲ್ಲಿದೆ. ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 245 ಬೂತ್‌ಗಳಿವೆ. ಪ್ರತಿ ಬೂತ್‌ನ ಕಾರ್ಯಕರ್ತರ ಮನೆಯಲ್ಲಿ ಬಾವುಟ ಹಾರಿಸುವಂತೆ ತಿಳಿಸಲಾಗಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಜಯಪ್ರಕಾಶ್, ನಗರ ಪಾಲಿಕೆ ಸದಸ್ಯರಾದ ಸುಬ್ಬಣ್ಣ, ಪ್ರಮೀಳಾ ಭರತ್, ರಂಗಸ್ವಾಮಿ, ಸತೀಶ್, ರವೀಂದ್ರ, ವೇದಾವತಿ, ಚಿಕ್ಕ ವೆಂಕಟ್, ಪ್ರಧಾನ ಕಾರ್ಯದರ್ಶಿ ರಮೇಶ್, ಪುನೀತ್, ಮಾಧ್ಯಮ ಸಂಚಾಲಕ ಮಹೇಶ್‌ರಾಜ್ ಅರಸ್, ಸೋಮಸುಂದರ್, ಬೂತ್ ಅಧ್ಯಕ್ಷ ಶಿವಪ್ರಕಾಶ್, ಹೇಮಾ ನಂದೀಶ್, ಸೂರಜ್, ತನುಜಾ, ಸಚ್ಚಿನ್, ಸಂಜೀವ್, ದಿನೇಶ್, ಅನೂಜ್ ಹಾಜರಿದ್ದರು.