

ಚಿತ್ರದುರ್ಗ: ಬುದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ಎಲ್ಲರನ್ನು ಪ್ರೀತಿಸೋಣ, ಗೌರವಿಸೋಣ. ಅದೇ ದಮ್ಮ ಮಾರ್ಗದ ಆಶಯ ಎಂದು ಭಾರತೀಯ ಬೌದ್ಧ ಮಹಾಸಭಾದ (ದಕ್ಷಿಣ) ಅಧ್ಯಕ್ಷ ಎಂ.ಸಿ.ಶಿವರಾಜ್ ಹೇಳಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಕಾರ‌್ಯಾಕಾರಿಣಿಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಆಶಯಗಳೊಂದಿಗೆ ಸ್ಥಾಪನೆಯಾಗಿರುವ, ದಲಿತ ಸಂಘಟನೆಗಳು ಪ್ರತಿ ಗ್ರಾಮ, ಪ್ರತಿ ಮನೆಗಳಿಗೆ ಬುದ್ಧ ಧರ್ಮವನ್ನು ತಲುಪಿಸಿದರೆ ಮಾತ್ರ ಅಂಬೇಡ್ಕರ್ ಅವರ ದಲಿತ ವಿಮೋಚನಾ ರಥವನ್ನು ಮುನ್ನಡೆಸಲು ಸಾಧ್ಯ ಎಂದರು.
ರಾಜ್ಯ ಪ್ರಧಾನ ಕಾರ‌್ಯದರ್ಶಿ ಡಾ.ಪಿ.ರಾಜೇಂದ್ರ ಮಾತನಾಡಿ, ಅಂಬೇಡ್ಕರ್ ಅವರು 1955ರಲ್ಲಿ ಬಿಎಸ್‌ಐ ಸಂಸ್ಥೆ ಸ್ಥಾಪಿಸಿದರು. ಅದರ ಮೂಲಕ ಬೌದ್ಧ ಧರ್ಮದ ದೀಕ್ಷಾ ಕಾರ‌್ಯಕ್ರಮ ಆಯೋಜಿಸುತ್ತಿದ್ದರು. ಬುದ್ಧ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರಚುರಪಡಿಸ ಬೇಕಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿದರು. ರಾಜ್ಯ ಕಾರ‌್ಯದರ್ಶಿಅಶೋಕ್ ಚಕ್ರವರ್ತಿ, ಕೇಂದ್ರ ಪದಾಧಿಕಾರಿ ಮಲ್ಲಿಕಾರ್ಜುನ್ ಬಾಲ್ಕಿ, ಸಂಸ್ಕಾರ ವಿಭಾಗ ಉಪಾಧ್ಯಕ್ಷ ಮಹೇಂದ್ರ ಮನ್ನಕಾಳೇ, ರಾಜ್ಯ ಪದಾಧಿಕಾರಿಗಳಾದ ದೊಡ್ಡಸ್ವಾಮಿ, ಅರ್ಜುನ್ ಕೇಸರಿ, ಪ್ರೊ.ಸಾಕ್ಯ ಶಾಮ್ ಇತರರಿದ್ದರು.
*ನಿರ್ಣಯಗಳು: ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮದ ಸ್ಥಾಪಿಸಬೇಕು. ಪರಿಶಿಷ್ಟ ಜಾತಿಯ ನವಬೌದ್ಧರಿಗೆ ಎಸ್‌ಸಿ ವಿದ್ಯಾರ್ಥಿ ವೇತನದ ದತ್ತಾಂಶಕ್ಕೆ ತಿದ್ದುಪಡಿ ತರುವ ಮೂಲಕ ಶೈಕ್ಷಣಿಕ ಸೌಲಭ್ಯಕ್ಕೆ ಅನುಕೂಲ ಮಾಡಿಕೊಡಬೇಕು. ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಬೌದ್ಧ ವಿಹಾರ ನಿರ್ಮಾಣಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ನಿರ್ಣಯ ಕೈಗೊಳ್ಳಲಾಯಿತು.
*ಸಮಿತಿ ರಚನೆ
ಜಿಲ್ಲಾಧ್ಯಕ್ಷ-ಬಿ.ಪಿ.ತಿಪ್ಪೇಸ್ವಾಮಿ, ಪ್ರಧಾನ ಕಾರ‌್ಯದರ್ಶಿ-ಮೊಳಕಾಲ್ಮೂರು ಎಸ್.ಪರಮೇಶ್, ಖಜಾಂಚಿ-ಭೀಮನಕೆರೆ ಪಿ.ತಿಪ್ಪೇಸ್ವಾಮಿ, ಕಾರ‌್ಯದರ್ಶಿ-ಡಾ.ಗುರುನಾಥ್, ಬಿರೇನಹಳ್ಳಿ ಕೆ.ರಾಮಚಂದ್ರಪ್ಪ, ಟಿ.ದುರ್ಗೇಶಪ್ಪ, ಹಿರಿಯೂರು ಕೃಷ್ಣಮೂರ್ತಿ, ಕೃಷ್ಣಪ್ಪ, ರಾಮ್ಶೇಖರ್, ರಾಮಣ್ಣ, ಪ್ರೊ.ಕರಿಬಸಪ್ಪ, ಎಲ್.ಕರಿಬಸವಯ್ಯ, ತುರುವನೂರು ಜಗನ್ನಾಥ್, ಚಳ್ಳಕೆರೆ ರವಿಕುಮಾರ್, ಬೆನಕನಹಳ್ಳಿ ಚಂದ್ರಪ್ಪ, ನಾಗೇಂದ್ರಪ್ಪ, ಸಿದ್ದೇಶ್ವರ ಜಿಲ್ಲಾ ಸಮಿತಿಗೆ ನೇಮಕಗೊಂಡರು.
*ಮಹಿಳಾ ಘಟಕ
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ-ಜೆ.ಸಿದ್ದಲಿಂಗಮ್ಮ, ಪ್ರಧಾನ ಕಾರ‌್ಯದರ್ಶಿ-ರಶ್ಮಿಕರಿಬಸಪ್ಪ, ಖಜಾಂಚಿ-ಶಕುಂತಲಮ್ಮ, ಜಿಲ್ಲಾ ಕಾರ‌್ಯದರ್ಶಿ-ಜಿ.ಶಾಂತಮ್ಮ ತಿಪ್ಪೇಸ್ವಾಮಿ, ದಾಕ್ಷಾಯಿಣಿ, ಪವಿತ್ರಾ ಪರಮೇಶ್, ಪ್ರೇಮರಾಮ ಶೇಖರ್, ಭಾರತಿಹನುಮಂತಪ್ಪ, ತಿಪ್ಪಮ್ಮಗಿರಿಯಪ್ಪ, ಲಕ್ಷ್ಮೀದೇವಿ ರುದ್ರಪ್ಪ, ವನಿತಕುಮಾರಿ, ಶಿಲ್ಪಾ ವೆಂಕಟೇಶ್ ಐಹೊಳೆ, ಸುಶೀಲಮ್ಮ ನೇಮಕಗೊಂಡರು.