ಮನೆ ಬೀಗ ಮುರಿದು ರು.2.80 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಮನೆಯ ಬೀಗ ಮುರಿದು ರಾತ್ರಿ ವೇಳೆ ಯಾರೂ ಇಲ್ಲದ ವೇಳೆ ೨.೮೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿಕೊಂಡ ಹೋದ ಘಟನೆ ನಗರದ ಉದನೂರ ರಸ್ತೆಯ ಚಂದ್ರಕಾAತ ಲೇಔಟ್‌ನಲ್ಲಿ ನಡೆದಿದೆ. ವಿಠಲ್ ಮುಚ್ಚಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಠಲ್ ಅವರ ಅತ್ತೆಮಾವ ಕುಂಬಮೇಳಕ್ಕೆ ಹೋಗಿದ್ದರಿಂದ ತಮ್ಮ ಮನೆಗೆ ಬೀಗ ಹಾಕಿ, ಅತ್ತೆ ಮಾವನ ಮನೆಗೆ ಹೋಗಿ ಉಳಿದು ಕೊಂಡಿದ್ದರು. ಫೆ.೧೭ರಂದು ಮನೆಗೆ ಬಂದಾಗ ಬೀಗ ಮುರಿದಿದ್ದು, ಬೆಡ್‌ರೂಮಿನಲ್ಲಿನ ಅಲ್ಮಾರಾವನ್ನು ಮುರಿಯಲಾಗಿತ್ತು. ಅದರಲ್ಲಿದ್ದ ೧೦ ಗ್ರಾಂ ಬಂಗಾರದ ಎರಡು ಸುತ್ತುಂಗುರ, ೧೦ ಗ್ರಾಂ ಬಂಗಾರದ ಚೈನ್, ನಗದು ಒಂದು ಲಕ್ಷ ರೂ. ಸೇರಿ ಆಭರಣ, ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net