ಮನೆ ಬೀಗ ಮುರಿದು ಬೆಳ್ಳಿ ಸಾಮಾನು ಕಳವು

Crime Logo
Published on

ಕಲಬುರಗಿ: ನಗರದ ಚೌಕ್ ಠಾಣೆ ವ್ಯಾಪ್ತಿಯ ಕಸ್ತೂರಿ ನಗರದ ಮೋದಿ ಲೇಔಟ್‌ನಲ್ಲಿ ಹಾಡಹಗಲೇ ಮನೆಯೊಂದರ ಬೀಗ ಮುರಿದು ದೇವರ ಬೆಳ್ಳಿಯ ಮೂರ್ತಿ ಇನ್ನಿತರ ಸಾಮಾನು ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ. ಅಣ್ಣಾರಾಯ ಕಡ್ಲಾ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಪತ್ನಿ ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಹಿಂಬಾಗಿಲು ಮುರಿದು ಕಳ್ಳರು ಮನೆಯೊಳಗೆ ನುಗ್ಗಿ ಅಲಮಾರಾದಲ್ಲಿದ್ದ ಬೆಳ್ಳಿ ಸಾಮಾನು ಸೇರಿ ಇನ್ನಿತರ ವಸ್ತು, ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net