ಮನೆ ಬೀಗ ಮುರಿದು ನಗದು, ಚಿನ್ನ-ಬೆಳ್ಳಿ ಆಭರಣ ಕಳವು

udp-theft
Published on

ಹಾಸನ :ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು 1.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 17,500 ನಗದು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ವಿದ್ಯಾನಗರದ ಪಶುವೈದ್ಯಕೀಯ ವಿದ್ಯಾಲಯದ ವಸತಿಗೃಹ, ಗೋಕುಲ ಕ್ಯಾಂಪಸ್‌ನಲ್ಲಿ ವಾಸವಾಗಿರುವ ಪುರುಷೋತ್ತಮ ಅವರು ಸೆ.28ರಂದು ಮನೆಗೆ ಬೀಗ ಹಾಕಿಕೊಂಡು ತಮ್ಮ ಊರಿಗೆ ಹೋಗಿದ್ದರು. ಮನೆಯ ಬೀಗ ಒಡೆದಿರುವುದನ್ನು ಗಮನಿಸಿದ ಸ್ಥಳೀಯರು ಅ.8ರಂದು ಪುರುಷೋತ್ತಮ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಊರಿನಿಂದ ಬಂದು ನೋಡಿದಾಗ ಮನೆ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಯ ಬೀಗ ಒಡೆದು, ಕಬ್ಬಿಣದ ಬೀರುವಿನ ಲಾಕರ್ ಮೀಟಿ ತೆಗೆದು ಬೀರುವಿನಲ್ಲಿಟ್ಟಿದ್ದ 95,000 ರೂ. ಬೆಲೆಬಾಳುವ 21.5 ಗ್ರಾಂ ತೂಕದ ಚಿನ್ನಾಭಣಗಳು. 28,000 ರೂ. ಬೆಲೆಬಾಳುವ ಸುಮಾರು 313 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹಾಗು 17,500 ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕಳವು ಮಾಡಿರುವವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಪುರುಷೋತ್ತಮ ಅ.9ರಂದು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net