ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳವು

theft home
Published on

ಹಾಸನ: ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಖದೀಮರು ಮನೆಯ ಬೀಗ ಮುರಿದು ಮನೆಯಲ್ಲಿದ್ದ 50 ಸಾವಿರ ರೂ. ನಗದು ಹಾಗೂ 40 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ಉಂಗುರ ಕಳವು ಮಾಡಿದ್ದಾರೆ.

ಹಾಸನ ತಾಲ್ಲೂಕು, ದುದ್ದ ಹೋಬಳಿ, ಕೋರವಂಗಲ ಕಾವಲು ಗ್ರಾಮದ ನಿವಾಸಿ ದಿನೇಶ್ ಅವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಮಕ್ಕಳೊಂದಿಗೆ ಕುಟುಂಬ ಸಮೇತ ಮಂಗಳೂರು, ಕಾಸರಗೂಡು, ವೈನಾಡಿಗೆ ಆ.17ರಂದು ಪ್ರವಾಸಕ್ಕೆ ತೆರಳಿದ್ದು. ಪ್ರವಾಸ ಮುಗಿಸಿಕೊಂಡು ಆ.20ರ ರಾತ್ರಿ 11 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದಿರುವುದು ಪತ್ತೆಯಾಗಿದೆ. ಮನೆಯ ಒಳಹೋಗಿ ನೋಡಿದಾಗ ರೂಮಿನ ಲಾಕರ್ ಹೊಡೆದು 50,000 ನಗದು ಮತ್ತು 40,000 ಬೆಲೆಯ 8 ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಕಳ್ಳರನ್ನು ಪತ್ತೆ ಮಾಡಿ ಕಳವು ಮಾಡಿದ ಹಣ ಹಾಗೂ ಒಡವೆಯನ್ನು ಹಿಂದಿರುಗಿಸಬೇಕು ಎಂದು ದಿನೇಶ್ ಅವರು ಆ.21ರಂದು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net