ಮನೆ ಬೀಗ ಮುರಿದು ನಗದು ಕಳವು

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಚಿತ್ರದುರ್ಗ:ನಗರದ ಬಸವೇಶ್ವರ ಆಸ್ಪತ್ರೆ ಬಳಿಯ ಕೆಎಚ್‌ಬಿ ಕಾಲನಿ ಮನೆಯೊಂದರ ಬೀಗ ಮುರಿದು,ದುಷ್ಕರ್ಮಿಗಳು 25 ಸಾವಿರ ರೂ.ನಗದು ದೋಚಿದ್ದಾರೆ. ಶ್ರೀಧರ ಎಂಬುವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಶನಿವಾರ ಸಂಜೆ ವದ್ಧಿಕೆರೆ ಸಿದ್ದಪ್ಪನ ದೇ ವಾಲಯಕ್ಕೆ ತೆರಳಿದ್ದು, ರಾತ್ರಿ ಮರಳಿದಾಗ ಕೃತ್ಯ ನಡೆದಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಠಾಣೆ ಪೊ ಲೀಸರು,ಸಿಸಿಟಿಟಿವಿ ದೃಶ್ಯಾವಳಿ ಪರಿಶೀಲನೆಯೊಂದಿಗೆ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net