ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

house-Theft
Published on

ಮೈಸೂರು: ವಿಜಯನಗರ 2ನೇ ಹಂತದಲ್ಲಿರುವ ರೈಲ್ವೆ ಲೇಔಟ್‌ನಲ್ಲಿ ಟೆರೆಸ್ ಬಾಗಿಲು ಮೀಟಿ ಒಳಗೆ ನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳನ್ನು ಕದ್ದು ಪರಾರಿಯಾಗಿದ್ದಾರೆ.

ಶಶಿಕಾಂತ್ ಅವರು ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ, ಕೊಲ್ಕತ್ತಾಗೆ ಹೋಗಿದ್ದರು. ಪ್ರವಾಸ ಮುಗಿಸಿ ವಾಪಸ್ ಬಂದಾಗಲೇ ಇದು ಗೊತ್ತಾಗಿದೆ. 1ನೇ ಮಹಡಿ ಕೊಠಡಿ ಕಬೋರ್ಡ್‌ಗಳ ಬಾಗಿಲು ತೆರೆದಿದ್ದವು.

ಕಳ್ಳರು ಚೂಪಾದ ಆಯುಧದಿಂದ ಟೆರೆಸ್ ಬಾಗಿಲು ಮೀಟಿ, ಒಳ ನುಗ್ಗಿರುವುದು ಪತ್ತೆಯಾಗಿದೆ. ಕಬೋರ್ಡ್ ಪರಿಶೀಲಿಸಿದಾಗ ಡ್ರಾವರ್‌ನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು ಇರಲಿಲ್ಲ.

ಮನೆ ಮಾಲೀಕ ನೀಡಿರುವ ದೂರಿನ ಅನ್ವಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net