ಮನೆ ಬಾಗಿಲು ಮುರಿದು ಕಳವು

Published on

ವೈ.ಎನ್​.ಹೊಸಕೋಟೆ: ಗ್ರಾಮದ ಸಂತೆಊರು ಬಾಗಿಲು ಪ್ರದೇಶದಲ್ಲಿ ಮಂಗಳವಾರ ಹಾಡಹಗಲೇ ಮನೆಯ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದಾರೆ. ಪದ್ಮಾವತಮ್ಮ ಎಂಬುವವರು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಕಾರ್ಯನಿಮಿತ್ತ ಬಸ್​ ನಿಲ್ದಾಣದತ್ತ ಬಂದಿದ್ದಾರೆ. ಇದನ್ನೇ ಅವಕಾಶ ಮಾಡಿಕೊಂಡ ಕಳ್ಳರು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ನೆಕ್ಲೆಸ್​, ಮಾಂಗಲ್ಯ ಸರ, ಕೊರಳಿನ ಸರ, ಕಿವಿಯೋಲೆ ಸೇರಿ ಒಟ್ಟು 70 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ದೋಚಿದ್ದಾರೆ. ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ತೆಗೆದಿರುವುದನ್ನು ಕಂಡು ಪರಿಶೀಲಿಸಿದಾಗ ಆಭರಣ ಕಳುವಾಗಿರುವುದು ಕಂಡುಬಂದಿದೆ. ವೈ.ಎನ್​.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net