ಮನೆ ಕುಸಿದು ಸಾವು

28MDG3 CRIME
Published on

ಮುಂಡರಗಿ: ಮನೆ ಕುಸಿದು ಬಿದ್ದು ಅಶೋಕ ವೀರಣ್ಣ ಹಳ್ಳಿಕೇರಿ(62) ಎಂಬುವವರು ಮೃತಪಟ್ಟ ಘಟನೆ ಪಟ್ಟಣದ ಚವಡಿ ಭಾಗದಲ್ಲಿ ಗುರುವಾರ ಸಂಭವಿಸಿದೆ.

ಬುಧವಾರ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಮನೆಯ ಗೋಡೆಗಳು ತೇವಗೊಂಡಿದ್ದವು. ಗುರುವಾರ ಸಂಜೆ ಮುಖ ತೊಳೆಯಲೆಂದು ಸ್ನಾನದ ಕೊಠಡಿಗೆ ತೆರಳಿದಾಗ ಮನೆ ಕುಸಿದಿದೆ. ಮಣ್ಣಿನಡಿ ಸಿಲುಕಿದ ಅಶೋಕ ಹೊರಬರಲಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಗ್ನಿಶಾಮಕ, ಪುರಸಭೆ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಜೆಸಿಬಿ ಮೂಲಕ ಮಣ್ಣು ಸರಿಸಿ ಮೃತ ದೇಹವನ್ನು ಹೊರ ತೆಗೆದರು. ತಹಸೀಲ್ದಾರ್ ಆಶಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಮುಂಡರಗಿ ಪೊಲೀಸ್​ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net